ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಬಿತ್ತು ಸಂಸದನ ವಿರುದ್ಧ ಮತ್ತೊಂದು ಕೇಸ್

ಕಾರವಾರ: ಫೆ.23 ರಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆನರಾ ಸಂಸದ ಅನಂತಕುಮಾರ್ ಹೆಗಡೆ ಅನ್ಯ ಧರ್ಮ ನಿಂದನೆ, ಕೋಮು ಪ್ರಚೋದಕ ಮಾತು, ಅಶಾಂತಿ ಉಂಟುಮಾಡುವ ಉದ್ರೇಕ ಭಾಷಣ ಹಾಗೂ ಮುಖ್ಯಮಂತ್ರಿ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಬೈದದ್ದು , ಫೆ. 24 ರಂದು ಕೆಲ ಮಾಧ್ಯಮಗಳಲ್ಲಿ ಪ್ರಕಾರವಾಗಿದ್ದು,ಇದನ್ನು ಆಧರಿಸಿ ಮುಂಡಗೋಡ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ರಾಮುಲ್ಲಾ ಖಾನ್ ಹಿಂದೂ ವಿರೋಧಿ. ಅವ ಹಿಂದುಗಳ ತೆರಿಗೆ ದುಡ್ಡ‌ನ್ನು ಚರ್ಚ ,ಮಸೀದಿಗೆ ಕೊಡ್ತಾನೆ. ಹಿಂದೂ ದೇವಾಲಯ ಹಾಳು ಬೀಳ್ತವೆ,ಹಿಂದುಗಳು ಬೇವಾರ್ಸಿಗಳಾ ? ಎಂದು ಕೋಮು ಪ್ರಚೋದಕ ಭಾಷಣ ಮಾಡಿದ್ದ‌ನ್ನು ಪೊಲೀಸರು ಸಂಗ್ರಹಿಸಿದ್ದರು. ನಂತರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯೋಣ ಎಂದಿದ್ದರು.

ದೆಹಲಿ ಭಾಗದಲ್ಲಿ ಪ್ರತಿಭಟನೆ ನಡೆಸಿರುವ ರೈತರು ದೇಶದ್ರೋಹಿಗಳು ಎಂದು ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಭಾಷಣ ಟಿವಿಯೊಂದರಲ್ಲಿ ಪ್ರಸಾರವಾದ ಸಾಕ್ಷಿ ಇಟ್ಟುಕೊಂಡಿದ್ದ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದರು. ಹೆಗಡೆ ವಿರುದ್ಧ ಐಪಿಸಿ 153 a, 153 b, 295a , 298 , 505 c ಸೆಕ್ಷನ್ ಅಡಿ ಕೇಸ್ ಮಾಡಿ ಎಫ್ ಐ ಆರ್ ಹಾಕಿದ್ದರು.

ಕುಮಟಾದಲ್ಲಿ ಮುಖ್ಯಮಂತ್ರಿಗಳಿಗೆ ಏಕ ವಚನದಲ್ಲಿ ಮಾತಾಡಿದ್ದ ಹೆಗಡೆ ವಿರುದ್ಧ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ
ಅನಂತ ಕುಮಾರ್ ಹೆಗಡೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಏಕವಚನದಲ್ಲಿ ಮಾತನಾಡದಂತೆ ಎಚ್ಚರಿಕೆ ‌ನೀಡಿತ್ತು. ತದನಂತರ ಬನವಾಸಿಯಲ್ಲಿ ತನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ , ಇದು ಯುದ್ಧಕಾಲ ,ಭರತನಾಟ್ಯ ಮಾಡಲು ಆಗಲ್ಲ, ಶಾಸ್ತ್ರೀಯ ಸಂಗೀತ ಹಾಡಲು ಆಗಲ್ಲ. ಸಿದ್ದರಾಮಯ್ಯ ನನ್ನ ಅಪ್ಪ ಅಲ್ಲ, ಮಾವನೂ ಅಲ್ಲ, ಅಳಿಯನೂ ಅಲ್ಲ,ಗೌರವ ಕೊಡಲು ಎಂದಿದ್ದರು.
ಈಗ ಮುಂಡಗೋಡನಲ್ಲಿ ಮತ್ತೆ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ವ್ಯಂಗ್ಯವಾಡಿದ್ದಾರೆ.
……

Latest Indian news

Popular Stories