ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ಹುದ್ದೆಗೆ ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೊನ್ನಾವರ ತಾಲೂಕಿನ ಮಂಕಿ ಬಿ ಅನಂತವಾಡಿ ಗ್ರಾ.ಪಂ. (ಪರಿಶಿಷ್ಟ ಜಾತಿ) ಮಾಗೋಡ ಗ್ರಾ.ಪಂ.2 ಬಿ) ಕೆಳಗಿನೂರು ಗ್ರಾ.ಪಂ. (ಸಾಮಾನ್ಯ, ಸಮತಳ ಮೀಸಲಾತಿ ಅಂಗವಿಕಲ), ಶಿರಸಿ ತಾಲೂಕಿನ ನೆಗ್ಗು ಗ್ರಾ.ಪಂ. (ಪ್ರವರ್ಗ 2( ಎ) , (ಸಮತಳ ಮೀಸಲಾತಿ ಮಹಿಳೆ), ಕುಮಟಾ ತಾಲೂಕಿನ ಹನೇಹಳ್ಳಿ ಗ್ರಾ.ಪಂ. ಸಾಮಾನ್ಯ, (ಸಮತಳ ಮೀಸಲಾತಿ ಗ್ರಾಮೀಣ) ಅಭ್ಯರ್ಥಿಯಾಗಿರಬೇಕು.

ಅಭ್ಯರ್ಥಿಯು ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿಯುಸಿ) ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಪಿಕೇಷನ್ ಕೋರ್ಸ ಇನ್ ಲೈಬ್ರರಿ ಸೈನ್ಸ್ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು.
ಕೆಳಗಿನೂರು, ನೆಗ್ಗು ಮತ್ತು ಹನೇಹಳ್ಳಿಯಲ್ಲಿ ಅರ್ಜಿ ಸಲ್ಲಿಸುವವರು ಅದೇ ಗ್ರಾಮ ಪಂಚಾಯತ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು.

ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಗ್ಗೆ ಸಂಬಂಧಪಟ್ಟ ರಹವಾಸಿ ಪ್ರಮಾಣ ಪತ್ರವನ್ನು ತಹಶೀಲ್ದಾರ ರವರಿಂದ ಪಡೆದು ಲಗತ್ತಿಸಿರಬೇಕು.ಮಂಕಿ (ಬಿ) ಅನಂತವಾಡಿ ಮತ್ತು ಮಾಗೋಡ, ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ನಿಗದಿ ಪಡಿಸಿದ ಮೀಸಲಾತಿಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆಯಾ ತಾಲೂಕಿನ ಬೇರೆ ಗ್ರಾಮ ಪಂಚಾಯತಿಗೆ ಒಳಪಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

*ವಯೋಮಿತಿ*: ಕನಿಷ್ಠ 18 ವರ್ಷ ಗರಿಷ್ಠ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷದೊಳಗಿರಬೇಕು. ಅಲ್ಲದೇ ವಿಧವೆಯರು, ಮಾಜಿ ಸೈನಿಕರು ಮುಂತಾದ ವರ್ಗದವರಿಗೆ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸುವ ಗರಿಷ್ಠ ವಯೋಮಿತಿಯನ್ನು ಕಲ್ಪಿಸಲಾಗುವುದು.

ಅರ್ಜಿ ನಮೂನೆಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ ಕಛೇರಿಯಲ್ಲಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಸೆ.30 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿಗೆ ಸಂಪರ್ಕಿಸುವಂತೆ ಗ್ರಾ.ಪಂ. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಮೇಲ್ವಿಚಾರಕರ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories