ಕಾರವಾರ : ವೇತನ ಹೆಚ್ಚಳ, ನೌಕರಿಗೆ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಜಿಲ್ಲೆಯ 1300 ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ನೀಡಿದರು.
ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯವರು ಗಂಗಾ ಚಲವಾದಿ, ಗಂಗಾಧರ ಬಡಿಗೇರ, ಆಶ್ವಿನಿ ಆಚಾರಿ, ನಿವೇದಿತಾ , ಭಾರತಿ, ಆಶಾ ನಾಯ್ಕ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಎದುರು ಅರ್ದಗಂಟೆ ಸಾಂಕೇತಿಕ ಧರಣಿ ನಡೆಸಿದ ನಂತರ , ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ
ಆಶಾ ಕಾರ್ಯಕರ್ತೆಯರು ಸಾಂಕೇತಿಕ ಧರಣಿ ನಡೆಸಿದರು.
ಸರ್ಕಾರ ಗ್ಯಾರಂಟಿ ಸಮೀಕ್ಷೆಗೆ ಆದೇಶಿಸಿದೆ. ಈ ಕಾರ್ಯಕ್ಕೆ ಕೇವಲ ಒಂದು ಸಾವಿರ ಗೌರವ ಧನ ಕೊಡುವುದಾಗಿ ಹೇಳಿದೆ. ನಮಗೆ ಈಗ ಆರೋಗ್ಯ ಇಲಾಖೆಯು ವಹಿಸುವ ಸಮೀಕ್ಷೆಗಳನ್ನು ಮಾಡುವುದೇ ಹೊರೆಯಾಗಿದೆ. ಈಗ ಗ್ಯಾರಂಟಿ ಸಮೀಕ್ಷೆ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ನಮ್ಮ ಬಳಿ ಮೊಬೈಲ್ ಇಲ್ಲ. ನಮಗೆ ಮೊಬೈಲ್ ಕೊಡಿಸಿದರೆ ಹಾಗೂ ಕರೆನ್ಸಿ ಹಾಕಿಸಿದರೆ ನಾವು ಸಮೀಕ್ಷೆ ಮಾಡುತ್ತೇವೆ ಎಂದು ಸರ್ಕಾರದ ಎದುರು ಆಶಾ ಕಾರ್ಯಕರ್ತೆಯರು ಬೇಡಿಕೆ ಮಂಡಿಸಿದರು.
ಅಲ್ಲದೇ ಪಲ್ಸ ಪೊಲಿಯೋ ಕೆಲಸಕ್ಕೆ ಕೇವಲ ರೂ.75 ಕೊಡಲಾಗುತ್ತದೆ. ತಿಂಗಳು ಕೊಡುವ 5000 ರೂ. ಗೌರವ ಧನ ಹೆಚ್ಚಿಸಬೇಕು. ಕೊಡುವ ಗೌರವ ಧನ ಹೆಚ್ಚಿಸಿದಲ್ಲಿ ಹೆಚ್ಚುವರಿ ಸಮೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂದು ಆಶಾ ಅಚಾರಿ ಹೇಳಿದರು.
ಆರೋಗ್ಯ ಇಲಾಖೆಯಡಿ ಸಮಾಜಿಕ, ಆರೋಗ್ಯ ಸಮೀಕ್ಷಕರೆಂದು ನಮ್ಮನ್ನು ಪ್ರಾರಂಭದಲ್ಲಿ ಪರಿಗಣಿಸಲಾಗಿತ್ತು. ಒಬ್ಬೊಬ್ಬ ಆಶಾ ಕಾರ್ಯಕರ್ತೆ ಒಂದು ಗ್ರಾಮ ಸಮೀಕ್ಷೆ ಮಾಡಬೇಕು. ಉತ್ತರ ಕನ್ನಡದ ಗ್ರಾಮಗಳಲ್ಲಿ ಮನೆಗಳು ದೂರ ದೂರ.ಹಾಗಾಗಿ ಸಮೀಕ್ಷೆ ಕಷ್ಟ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ಆಶ ಕಾರ್ಯಕರ್ತೆಯರು ಸರ್ಕಾರದ ಗಮನಸೆಳೆದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಆಶಾ ಕಾರ್ಯಕರ್ತೆಯರ ಸಂಘಟನೆಯ ಪದಾಧಿಕಾರಿಗಳು ಇವತ್ತಿನ ಸಾಂಕೇತಿಕ ಧರಣಿಯಲ್ಲಿ ಭಾಗವಹಿಸಿದ್ದರು.
……