ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಗೋಕರ್ಣದ ಆತ್ಮ ಲಿಂಗ ಜಲಾವೃತವಾಗಿದೆ.
ಇಂದು ಸಹ ಮಳೆ ಮುಂದುವರಿದಿದೆ.
ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಮಳೆಯಿಂದ ಗೋಕರ್ಣ ಮಹಾಬಲೇಶ್ವರನ ಗರ್ಭಗುಡಿಗೆ ಮಳೆ ನೀರು ನುಗ್ಗಿದ್ದು,ಆತ್ಮಲಿಂಗ ಇರುವ ಗರ್ಭಗುಡಿಯೊಳಗೆ ಮಳೆ ನೀರು ನುಗ್ಗಿದೆ.
ಕರಾವಳಿ ತಾಲೂಕುಗಳಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ.
ಜೂನ್ 11 ರವರೆಗೆ ಅಧಿಕ ಮಳೆಯಾಗಲಿದೆ ಎಂದು
ಹವಾಮಾನ ಇಲಾಖೆಯಿಂದ ಸೂಚನೆ ನೀಡಿದೆ.
ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಗೋಕರ್ಣದ ರಸ್ತೆಗಳ ಮೇಲೂ ನೀರು ಹರಿಯುತ್ತಿದೆ .ಗೋಕರ್ಣದ ಸಂಗಮ ನಾಲಾಕ್ಕೆ ಸರಾಗವಾಗಿ ಮಳೆ ನೀರು ಹರಿಯದೆ ಇದ್ದುದು ಅವಾಂತರಕ್ಕೆ ಕಾರಣವಾಗಿದೆ.
ಸಮುದ್ರ ಸೇರುವ ಮಳೆ ನೀರು ಸಂಗಮ ನಾಲದ ಹತ್ತಿರ ಅವೈಜ್ಞಾನಿಕ ಸೇತುವೆ ನಿರ್ಮಾಣವೇ ನೀರು ಹರಿದು ಹೋಗದೆ ಇರಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಚ್ಚಿದ ನಾಲಾದ ಕೋಡಿ ಕಡಿದು ಸಂಗಮ ನಾಲದ ನೀರು ಹರಿದು ಹೋಗಲು ಸಾರ್ವಜನಿಕರು ಅವಕಾಶ ಮಾಡಿಕೊಟ್ಟರು.