ಬಿಜೆಪಿಗರು ಸಂವಿಧಾನ ಬದಲಿಸಿ ಅಂಬಾನಿ ಅದಾನಿಗೆ ದೇಶ ಮಾರಲು ಹೊರಟಿದ್ದಾರೆ : ಸಚಿವ ವೈದ್ಯ ಆರೋಪ

ಕಾರವಾರ: ಬಿಜೆಪಿಗರು ಸಂವಿಧಾನ ಬದಲಿಸಿ ಅಂಬಾನಿ ಅದಾನಿಗೆ ದೇಶ ಮಾರಲು ಹೊರಟಿದ್ದಾರೆ ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಆರೋಪಿಸಿದರು. ಕಾರವಾರದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಬೆಳಿಗ್ಗೆ ಮಾತನಾಡಿದರು.

ಬಿಜೆಪಿ 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎನ್ನುವ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ ನೀಡಿದರು. ಸಂವಿಧಾನ ತಿದ್ದುಪಡಿ ಮಾಡಲು 400 ಸೀಟ್ ಬೇಕಾಗಿಲ್ಲ. 400 ಸೀಟ್ ಬರಬೇಕು ಎಂದು ಬಿಜೆಪಿ ಸಂಸದ ಹೆಗಡೆ ಹೇಳುವುದನ್ನ ನೋಡಿದರೆ ಸಂವಿಧಾನವನ್ನೇ ತೆಗೆಯುವ ಉದ್ದೇಶ ಇವರದ್ದು ಎಂದು ನನಗೆ ಅನ್ನಿಸಿದೆ ಎಂದರು.
ಬಿಜೆಪಿ ರಾಜ್ಯ ಅಧ್ಯಕ್ಷ ವಿಜೇಂದ್ರ ಅವರಿಗೆ ನಾನು ಒಂದು ವಿಷಯ ಹೇಳಲು ಇಚ್ಚೆ ಪಡುತ್ತೇನೆ ಎಂದ ವೈದ್ಯ , ಇಂತಹ ಹೇಳಿಕೆ ಕೊಡುವವರನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತೀರಾ ಎಂದರೆ , ಅವರ ಇಚ್ಚೆಯು ಸಂವಿಧಾನ ಬದಲಾವಣೆ ಮಾಡುವುದು ಇರಬೇಕು ಅಲ್ಲವೇ ಎಂದರು‌ ಸಂವಿಧಾನ ಇರದಿದ್ದರೆ ಚಹಾ ಮಾರುವ ಮೋದಿಯವರು ಇಂದು ಪ್ರಧಾನಿ ಆಗುತ್ತಿದ್ದರಾ ? . ಸಂವಿಧಾನ ತೆಗೆದು ದೇಶವನ್ನು ಅಂಬಾನಿ ಅದಾನಿಗೆ ಕೊಡುವ ಉದ್ದೇಶ ಇರಬೇಕು.
ನಿಮಗೆ ಸಂವಿಧಾನದ ಮೇಲೆ ಗೌರವ ಇದ್ದರೆ,
ಅನಂತ್ ಕುಮಾರ್ ಹೆಗಡೆಯನ್ನು ಮೊದಲು ಬಿಜೆಪಿಯಿಂದ ಸಸ್ಪೆಂಡ್ ಮಾಡಿ. ಅವರನ್ನ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುವುದಾದರೆ ಸಂವಿಧಾನ ಬದಲಿಸುವ ಉದ್ದೇಶ ಇರಬೇಕು. ಬಿಜೆಪಿ ನಾಯಕರ ಪ್ರೇರಣೆ ಇಲ್ಲದೆ ಅನಂತ್ ಕುಮಾರ್ ಹೆಗಡೆ ಮಾತನಾಡಿದ್ದಾರಾ ? . ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಹೇಳಿಕೆ‌ ನೀಡಿದ್ದರೆ ನಮ್ಮನ್ನ ಪಕ್ಷದಲ್ಲಿ ‌ಇಡುತ್ತಿರಲಿಲ್ಲ. ನಾವು ಶಾಸಕರಾಗಿರುವುದು, ಅನಂತ್ ಕುಮಾರ್ ಹೆಗಡೆ ಸಂಸದರಾಗಿರುವುದು ಸಂವಿಧಾನದಿಂದಲೇ ಎಂಬುದು ನೆನಪಿಡಿ ಎಂದು ಸಚಿವ ವೈದ್ಯ ಹೇಳಿದರು.

Latest Indian news

Popular Stories