Uttara KannadaCrime

ಮುರುಡೇಶ್ವರ ತೆರ್ನಮಕ್ಕಿಯಲ್ಲಿ ಮನೆಗಳ್ಳತನ : 40 ಗ್ರಾಂ ಬಂಗಾರದ ಆಭರಣ ದೋಚಿದ ಕಳ್ಳರು

ಕಾರವಾರ: ಮುರುಡೇಶ್ವರ ತೆರ್ನಮಕ್ಕಿಯಲ್ಲಿ ಮಮತಾ ಕೃಷ್ಣ ಶೆಟ್ಟಿ ಎಂಬುವವರ ಮನೆಗಳ್ಳತನವಾಗಿದ್ದು,‌ಕಪಾಟಿನಲ್ಲಿದ್ದ 40 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳರು ದೋಚಿದ್ದಾರೆ.


ಮಮತಾ ಅವರು ಗಂಡನ ಮನೆಗೆ ದೀಪಾವಳಿ ಹಬ್ಬಕ್ಕೆ ತೆರಳಿದಾಗ ಅವರ ತವರು ಮನೆಯಲ್ಲಿ ಕಳ್ಳತನವಾಗಿದೆ. ಮನೆ ಬಾಗಿಲು ಮುರಿದು, ಕಪಾಟು ಒಡೆದು ಬಂಗಾರದ ಸರ, ಕಿವಿಯೋಲೆ,‌ಐದು ಉಂಗುರಗಳು ಸೇರಿ 1,40,000 ರೂ. ಬೆಲೆಯ ಆಭರಣ ಕಳ್ಳತನವಾಗಿದೆ ಎಂದು ಮಮತಾ ಮುರುಡೇಶ್ವರ ಠಾಣೆಯಲ್ಲಿ ದೂರು ‌ನೀಡಿದ್ದಾರೆ. ಮಮತ ಸಹೋದರ ಮನೆಗೆ ಬಂದಾಗ ಮನೆ ಕಳ್ಳತನವಾದುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಶ್ವಾನದಳ ತಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ಚುರುಕು ಗೊಂಡಿದೆ.
…..

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button