ಬರ್ಗಿ ಬಳಿ ಕಾರ್ ಪಲ್ಟಿ : ಅಪಾಯದಿಂದ ಪ್ರಯಾಣಿಕರು ಪಾರು

ಕಾರವಾರ : ಹೊನ್ನಾವರ ಕಡೆಯಿಂದ ಕಾರವಾರಕ್ಕೆ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಗ್ರಾಮದ ಬಳಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಕಾರವಾರ ಕೆಎಚ್‌ಬಿ ಕಾಲೋನಿಯ ಸಚಿನ್ ಶೇಟ್ ಎಂಬುವವರಿಗೆ ಸೇರಿರುವ ಕಾರು ಇದಾಗಿದ್ದು, ಇವರು ನಿನ್ನೆ ಧರ್ಮಸ್ಥಳದಿಂದ ಬಂದು ಕರ್ಕಿ ಗ್ರಾಮದಲ್ಲಿವ ಸಂಬಂಧಿಕರ ಮನೆಯಲ್ಲಿ ಉಳಿದು ಕೊಂಡಿದ್ದರು‌ . ಇಂದು ಬೆಳಿಗ್ಗೆ ಕಾರವಾರಕ್ಕೆ ಕಾರ್ ನಲ್ಲಿ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬರ್ಗಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಘಟಬೀರ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಪಲ್ಟಿಯಾಗಿದೆ.

ಕಾರಿನಲ್ಲಿ ಎಂಟು ತಿಂಗಳ ಗರ್ಭಿಣಿ ಸಹ ಪ್ರಯಾಣ ಮಾಡುತ್ತಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಇನ್ನೂ ಪಲ್ಟಿಯಾಗಿರುವ ಕಾರನ್ನ ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ‌.

Latest Indian news

Popular Stories