ವೇಶ್ಯಾವಾಟಿಕೆಗೆ ವೃತ್ತಿ ಗೌರವ ಪ್ರಾಪ್ತವಾಗಿಲ್ಲ : ಸೆಕ್ಸ್ ವರ್ಕರ್ಸ್ ಕಾರ್ಯದರ್ಶಿ ಹುಲಿಗೆಮ್ಮ

ಕಾರವಾರ: ಮಹಿಳಾ ಕ್ರಾಂತಿ ಎನ್ ಜಿಒ ಸೆಕ್ಸ ವರ್ಕರ್ಸ್ ಹಕ್ಕುಗಳ ರಕ್ಷಣೆ ಮಾಡುತ್ತಿದೆ ಹಾಗೂ ಕರ್ನಾಟಕ ಏಡ್ಸ ನಿಯಂತ್ರಣ ಹಾಗೂ ಜಾಗೃತಿ ಅಡಿ ಕೆಲಸ‌ ಮಾಡುತ್ತಿದೆ ಎಂದು ಉತ್ತರ ಕರ್ನಾಟಕ ಸೆಕ್ಸ ವರ್ಕರ್ಸ ಯುನಿಯನ್ ಕಾರ್ಯದರ್ಶಿ ಹುಲಿಗೆಮ್ಮ ಹೇಳಿದರು.

ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ಮಾಡಿದ ಅವರು ವೇಶ್ಯಾವಾಟಿಕೆಗೆ ವೃತ್ತಿ ಗೌರವ ಪ್ರಾಪ್ತಯಾಗಿಲ್ಲ. ಈ ವೃತ್ತಿ ಅನಾದಿ ಕಾಲದಿಂದಲೂ ಇದೆ. ಹಿಂದೆಯೂ ಇತ್ತು. ಈಗಲೂ ಇದೆ. ಆದರೆ ವೃತ್ತಿಗೆ ಗೌರವ ಇಲ್ಲದ ಕಾರಣ ಯಾವ ಹೆಣ್ಣೂ ನಾವು ಈ ವೃತ್ತಿ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿಲ್ಲ ಎಂದರು.
ಯಾವ ಹೆಣ್ಣು ವೇಶ್ಯಾವಾಟಿಕೆ ಮಾಡಲು ಖುಷಿ ಯಿಂದ ಬರುವುದಿಲ್ಲ. ಗಂಡನ ಕಿರುಕುಳ, ಆರ್ಥಿಕ ಬಡತನ, ಅಸಹಾಯಕ ಸ್ಥಿತಿ, ‌ಮಾರಾಟವಾದ ಅಮಾಯಕರು ಈ ವೃತ್ತಿಗೆ ಬರುತ್ತಾರೆ. ಮಹಿಳಾ ಕ್ರಾಂತಿ ಕರ್ನಾಟಕ ರಾಜ್ಯ ಏಡ್ಸ ಪ್ರಿವೆನಷನ್ ಸೊಸೈಟಿಯ ಅಡಿ ಕೆಲಸ‌ ಮಾಡುತ್ತದೆ. ಇಲ್ಲಿ ಆರು ತಿಂಗಳಿಗೆ ಒಮ್ಮೆ ಅನುದಾನ ಬರುತ್ತದೆ. ‌ಕೆಲಸ‌ ಮಾಡಿದ ಸಿಬ್ಬಂದಿಗೆ ವೇತನ ವಿತರಣೆ ವಿಳಂಬ ಸಹಜವಾದುದು. ಕೆಲಸ‌ಮಾಡದ , ರಿಪೋರ್ಟ್ ನೀಡದ ಸಿಬ್ಬಂದಿಗೆ ವೇತನವಾಗುವುದಿಲ್ಲ ಎಂದರು.

ಹಳದಿ ಕುಂಕುಮ ಕಾರ್ಯಕ್ರಮ ಮಾಡಿದ್ದು, ನಮ್ಮ ಗೌರವಿಸದ ಸಮಾಜದಲ್ಲಿ, ‌ನಮಗೂ ಒಂದು ಬದುಕಿದೆ ಎಂಬ ಕಾರಣಕ್ಕೆ ಮಾಡಿದ್ದೇವೆ. ಆದರೆ ಒಳ್ಳೆಯ ಕುಟುಂಬದ ಹೆಣ್ಣು ಮಕ್ಕಳನ್ನು ‌ಕರೆದು, ಅವರನ್ನು ಸೆಕ್ಸ ವರ್ಕರ್ ಎಂದು ಪಟ್ಟಿ ಮಾಡಿಲ್ಲ. ಸೆಕ್ಸ ವರ್ಕ ಮಾಡುವ ನಮ್ಮ ಜೊತೆಗೆ ನಮ್ಮಂಥವರೇ ಬರುತ್ತಾರೆ ಹೊರತು ಸ್ಥಿತಿಗತಿ ಚೆನ್ನಾಗಿದ್ದವರು ಬರುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 3006 ಜನ ಸೆಕ್ಸ ವರ್ಕರ್ಸ್ ಇದ್ದಾರೆ. ಇದು ಹೆಮ್ಮೆಯ ಸಂಗತಿಯಲ್ಲ. ಆದರೂ ನಾವು ಏಡ್ಸ ನಿಯಂತ್ರಣಕ್ಕೆ ಜಾಗೃತಿ ಮೂಡಿಸುತ್ತೇವೆ ಎಂದರು. ಪೊಲೀಸ್ ದೌರ್ಜನ್ಯ‌ ಹೆಚ್ಚಾದಾಗ ಸೆಕ್ಸ ವರ್ಕರ್ಸ ಒಟ್ಟಾಗಿ ಇಡೀ ರಾಜ್ಯ, ಪ್ರತಿ ಜಿಲ್ಲೆಯಲ್ಲಿ, ‌ದೇಶದಲ್ಲಿ ನಮ್ಮ ಸಂಘಟನೆ ಇದೆ. ವಿಶ್ವ ಮಟ್ಟದಲ್ಲಿ ಸಹ ಇದೆ ಎಂದು ಹುಲಿಗೆಮ್ಮ ಹೇಳಿದರು.

ಮಹಿಳಾ ಕ್ರಾಂತಿ ಎನ್ ಜಿ ಒ ಅಧ್ಯಕ್ಷೆ ಗೀತಾ ಮಿರಾಶಿ ಮಾತನಾಡಿ ಈಚೆಗೆ ಶಿರಸಿಯ
ವರ್ಲ್ಡ್ ಹ್ಯೂಮನ್ ರೈಟ್ಸ್ ಆರ್ಕೆ ಫೌಂಡೇಶನ್ ನವರು ಮಹಿಳಾ ಕ್ರಾಂತಿ ಸಂಘಟನೆಯ ಬಗ್ಗೆ ಮಾಡಿದ ಅಪಾದನೆ ಅಸತ್ಯದಿಂದ ಕೂಡಿದೆ ಎಂದರು.ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು‌ .

ಜ್ಯೋತಿ, ದೀಪಾ, ಸಾಧನಾ ‌ಸಂಸ್ಥೆಯ ಗೀತಾ, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
…….

Latest Indian news

Popular Stories