ಕಾರವಾರ: ಕೈಗಾ ಅಣುಸ್ಥಾವರ ಘಟಕದ ಪ್ರವೇಶದ್ವಾರದ ಬಳಿ ಸಿಐಎಸ್ಎಫ್ ಸಿಬ್ಬಂದಿ ಸ್ವಯಂ ಗನ್ ಶಾಟ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಸಂಜೆ ಐದು ಗಂಟೆ ಸುಮಾರಿಗೆ ನಡೆದಿದೆ.
ಹರಿಂದರ್ ರಾಮ್ (28) ಎಂಬ ಸಿಐಎಸ್ ಎಫ್ ಸಿಬ್ಬಂದಿ ಕೈಗಾ ಅಣುವಿದ್ಯುತ್ ಸ್ಥಾವರದ ಘಟಕದ ಕಾವಲು ಕರ್ತವ್ಯದಲ್ಲಿದ್ದರು. ಅವರ ಕೈಯಲ್ಲಿದ್ದ ಬಂದೂಕು ಫೈರ್ ಆಗಿ ತಲೆಗೆ ಗುಂಡು ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೈಯಲ್ಲಿದ್ದ ಬಂದೂಕು ಹೇಗೆ ಫೈರಾಯಿತು ಎಂಬ ಬಗ್ಗೆ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆದಿದೆ. ಎಫ್ .ಎಸ್. ಎಲ್. ತಂಡ ಕಾರವಾರದಿಂದ ಕೈಗಾಕ್ಕೆ ಧಾವಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ತೆರಳಿದ್ದಾರೆ. ಬಿಹಾರ ಮೂಲದ ಹರಿಂದರ್ ಕೈಗಾ ಸೆಕ್ಯುರಿಟಿ ಕೆಲಸದಲ್ಲಿದ್ದರು. ಕೈಗಾ ಸನಿಹದ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
…..