ಬಿಜೆಪಿ ಪೋಸ್ಟರ್ ನಿಂದ ಹೆಬ್ಬಾರ್ ಭಾಚಚಿತ್ರಕ್ಕೆ ಕೋಕ್ | ಮುಂಡಗೋಡ ಬಿಜೆಪಿ ಸಮಾವೇಶಕ್ಕೆ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಗೈರು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಚುನಾವಣಾ ಬ್ಯಾನರ್ ಗಳಲ್ಲಿ ಬಿಜೆಪಿ ಶಾಸಕ ಹೆಬ್ಬಾರ್ ಭಾಚಚಿತ್ರಕ್ಕೆ ಕೋಕ್ ನೀಡಲಾಗುತ್ತಿದೆ. ಮುಂಡಗೋಡ ಪಟ್ಟಣದ ಬಿಜೆಪಿ ಸಮಾವೇಶದ ವೇದಿಕೆಯ ಬೃಹತ್

ಪೋಸ್ಟರ್ ನಿಂದ ಶಾಸಕ ಶಿವರಾಮ ಹೆಬ್ಬಾರ್ ಭಾಚಚಿತ್ರಕ್ಕೆ ಕೋಕ್ ನೀಡಲಾಗಿದೆ.
ಮುಂಡಗೋಡ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧುವಾರ ಅಪರಾಹ್ನ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದ ವೇದಿಕೆಯ ಮೇಲೆ ಹಾಕಿರುವ  ಬ್ಯಾನರನಲ್ಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರ ಪೋಟೋ ತೆಗೆದು ಹಾಕಿರುವುದು ಕಂಡುಬಂದಿದೆ.

ಬುಧವಾರ ನಡೆದ ಕಾರ್ಯಕರ್ತ ಸಮಾವೇಶದಲ್ಲಿ  ಬಿಜೆಪಿ ಉಪಾಧ್ಯಕ್ಷ ರೂಪಾಲಿ ನಾಯ್ಕ, ವಿಧಾನ ಪರಿಷತ್ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ, ಸೇರಿದಂತೆ ಜೆಡಿಎಸ್ ಮುಖಂಡರ ಪೋಟೋ ವೇದಿಕೆಯ ಬ್ಯಾನರನಲ್ಲಿ ಹಾಕಲಾಗಿದೆ. ಆದರೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಇಲ್ಲದೆ ಇರುವುದು ಊಹಾಪೋಹಗಳಿಗೆ ಕಾರಣವಾಗಿದೆ.
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರರನ್ನು ಬಿಟ್ಟು ಲೋಕಸಭಾ ಚುನಾವಣಿಗೆ ಬಿಜೆಪಿ ಮುಂದದಂತೆ ಕಾಣುತ್ತಿದೆ.

ಅಲ್ಲದೆ ಶಾಸಕರೂ ಸಹ ಕೆಲ ತಿಂಗಳಿಂದ ಬಿಜೆಪಿ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದರಿಂದ ಬಿಜೆಪಿ ಅವರನ್ನು ಕೈ ಬಿಟ್ಟರಬಹುದು ಎಂಬ ಪ್ರಶ್ನೆ ಮೂಡಿದೆ.
ಸಂಸದ ಅನಂತ ಕುಮಾರ್ ‌ಹೆಗಡೆ ಭಾವಚಿತ್ರ ಬಳಸಲಾಗುತ್ತದೆ. ಆದರೆ ಅವರು ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ.

Latest Indian news

Popular Stories