ಲಂಡನ್ ನಗರದ ಸಮಾಜ ಸುಧಾರಕ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಿದ ಕಾಂಗ್ರೆಸ್ ಧುರೀಣ ಆರ್.ವಿ. ದೇಶಪಾಂಡೆ

ಕಾರವಾರ : ಲಂಡನ್ ನಗರದ ಥೇಮ್ಸ್ ನದಿ ದಡದಲ್ಲಿರುವ ಜಗಜ್ಯೋತಿ ಶ್ರೀ ಬಸವೇಶ್ವರ ಪ್ರತಿಮೆ ಇರುವ ಸ್ಥಳಕ್ಕೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ,ಕಾಂಗ್ರೆಸ್ ಧುರೀಣ ಹಾಗೂ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಭೇಟಿ ನೀಡಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಲಂಡನ್ ಪ್ರವಾಸದಲ್ಲಿರುವ ಶಾಸಕರು ಬ್ರಿಟಿಷ್ ಸಂಸತ್ ಭವನದ ಎದುರು ಪ್ರತಿಷ್ಠಾಪಿಸಿರುವ ಸಮಾಜ ಪರಿವರ್ತಕ, ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.

ಈ ಐತಿಹಾಸಿಕ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಪ್ರವರ್ತಕನ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ಹಾಗೂ ಗೌರವದ ಸಂಗತಿಯಾಗಿದೆ ಎಂದು ದೇಶಪಾಂಡೆ ನುಡಿದರು.

ಈ ಸಂದರ್ಭದಲ್ಲಿ ಕಲಬುರ್ಗಿ ಮೂಲದ ಕನ್ನಡಿಗ ಲಂಡನ್ ನ ಲ್ಯಾಂಬೇತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರಿಂದ ಗೌರವ ಸ್ಮರಣಿಕೆಯನ್ನು ಸ್ವೀಕರಿಸಿ ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿದ ಲ್ಯಾಂಬೇತ್ ಬಸವೇಶ್ವರ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದರು.
……

Latest Indian news

Popular Stories