ಮುದಗಾ ಸೀಬರ್ಡ ಕಾರ್ಮಿಕ ಕಾಲೂನಿಯಲ್ಲಿ ಸಿಲೆಂಡರ್ ಸ್ಪೋಟ: ನಾಲ್ಕು ಶೆಡ್ ಆಹುತಿ

ಕಾರವಾರ: ಇಲ್ಲಿಗೆ ಸಮೀಪದ ನೌಕಾನೆಲೆ ಮುದಗಾ ಸೀಬರ್ಡ ಕಾರ್ಮಿಕರ ಕಾಲೂನಿಯಲ್ಲಿ ಸಿಲೆಂಡರ್ ಸ್ಪೋಟ ಗೊಂಡು ನಾಲ್ಕು ಶೆಡ್ ಬೆಂಕಿಗೆ ಆಹುತಿಯಾಗಿವೆ. ಇಂದು ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.

ಭಾರೀ ಶಬ್ದ ‌ಕೇಳಿ ಕಾರ್ಮಿಕರು ಶೆಡ್ ‌ನಿಂದ ಹೊರಗೆ ಓಡಿ ಬಂದಿದ್ದಾರೆ. 150 ಶೆಡ್ ಗಳಲ್ಲಿ 400 ಕ್ಕೂ ಹೆಚ್ಚು ಕಾರ್ಮಿಕರು ವಾಸವಾಗಿದ್ದಾರೆ. ಬಹುತೇಕ ಎಲ್ಲರೂ ಹೊರ ರಾಜ್ಯದ ಕಾರ್ಮಿಕರು. ಸಿಲೆಂಡರ್ ಸ್ಪೋಟದಿಂದ ನಾಲ್ಕು ಶೆಡ್ ಬೆಂಕಿಗೆ ದಹಿಸಿವೆ. ಆಗ್ನಿ ಶಾಮಕದಳ ಬೆಂಕಿ‌ ನಂದಿಸಿದೆ. ಹೆಚ್ಚಿನ ಅನಾಹುತ‌ ತಪ್ಪಿದೆ‌.

Latest Indian news

Popular Stories