ಮಹಾತ್ಮ ಗಾಂಧೀಜಿ ಕಾರವಾರದಲ್ಲಿ ತಂಗಿದ್ದ ಮನೆಯ ಡಾಕ್ಯುಮೆಂಟರಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಭರವಸೆ

ಕಾರವಾರ : ಮಹಾತ್ಮ ಗಾಂಧೀಜಿಯವರು 1933-34 ರಲ್ಲಿ ಹರಿಜನ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಕಾರವಾರಕ್ಕೆ ಆಗಮಿಸಿ, ಕಾರವಾರದ ಹಳದಿಪುರ ಅವರ ನಿವಾಸದಲ್ಲಿ 27-2-1934 ರಂದು ತಂಗಿದ್ದು, ಗಾಂಧೀಜಿಯವರು ಭೇಟಿ ನೀಡಿದ ದಿನದಂದು ಬಳಕೆ ಮಾಡಿದ ವಸ್ತುಗಳನ್ನು ಹಾಗೂ ಆ ಕಾಲದ ಛಾಯಾಚಿತ್ರಗಳು ಸೇರಿದಂತೆ ಅನೇಕ ವಸ್ತುಗಳನ್ನು ಹಳದಿಪುರ ಅವರ ಕುಟುಂಬದವರು ತುಂಬಾ ಜೋಪಾನವಾಗಿ ಇರಿಸಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿದ ಮೂಲಕ ಡಾಕ್ಯುಮೆಂಟರಿ ಮಾಡಲು ನಿರ್ಧರಿಸಲಾಗಿದೆ ಎಂದರು.


ಅವರು ಬುಧವಾರ, ಗಾಂಧೀ ಜಯಂತಿ ಕಾರ್ಯಕ್ರಮದ ನಂತರ ಹಳದಿಪುರ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು.
ಮನೆಯಲ್ಲಿದ್ದ ಆಗಿನ ಕಾಲದ ಹಳೆಯ ಗ್ರಾಮಪೋನ್ ಸೇರಿದಂತೆ ಇತರೇ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿದ್ದು, ಅವುಗಳನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಈ ವಸ್ತುಗಳನ್ನು ತಾನೇ ದುರಸ್ತಿ ಮಾಡಿಸಿಕೊಡುವುದಾಗಿ ಮನೆಯವರಿಗೆ ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಪೌರಾಯುಕ್ತ ಜಗದೀಶ್ ಹುಲಗೆಜ್ಜಿ , ಹಳದಿಪುರ ಕುಟುಂಬದ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.
…………

Latest Indian news

Popular Stories