ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳಿಗೆ ಮಾ. 1 ರಂದು ಮನೆ ಮಂಜೂರಾತಿ ಆದೇಶ

ಕಾರವಾರ : ಕಾರವಾರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಆಯ್ಕೆ ಆಗಿರುವ ಮನೆ ರಹಿತ ಫಲಾನುಬಾವಿಗಳಿಗೆ ಸರಕಾರದಿಂದ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಮಾ. 1 ರಂದು ಬೆಳಿಗ್ಗೆ 10.30 ಘಂಟೆಗೆ ಮನೆ ಮಂಜೂರಾತಿ ಆದೇಶ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರವಾರ ಅಂಕೋಲಾ ಶಾಸಕರ ಕಚೇರಿ ಅಧಿಕಾರಿ ತಿಳಿಸಿದ್ದಾರೆ.

ಕಾರವಾರ ತಾಲೂಕಿನ ಹದಿನೆಂಟು ಗ್ರಾಮ ಪಂಚಾಯತಿನ ಸುಮಾರು 499 ಅರ್ಹ ಫಲಾನುಭವಿಗಳು ಈ ಮನೆ ಮಂಜೂರಾತಿ ಪತ್ರ ಪಡೆಯಲಿದ್ದಾರೆ.ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಕೃಷ್ಣಾ ಸೈಲ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.‌ ಎಲ್ಲಾ ಗ್ರಾಮ ಪಂಚಾಯತಿಗಳ ಅರ್ಹ ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ತಪ್ಪದೆ ಹಾಜರಾಗಲು ಕೋರಿದೆ. ಕಾರವಾರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿ. ಪಿ. ಎಗಣಗೌಡರ ಈ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಲಿರುವರು.
……

Latest Indian news

Popular Stories