ಸೊಲ್ಲಾಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಶುಕ್ರವಾರ ಹಸ್ತಾಂತರಿಸಿದ ನಂತರ, ಸೋಲಾಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರಧಾನಿ ಭಾರತದ ಅತಿ ದೊಡ್ಡ ಹೌಸಿಂಗ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾರಾಷ್ಟ್ರದ ಸೋಲಾಪುರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಸುಮಾರು 15,024 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಈ ಫಲಾನುಭವಿಗಳಲ್ಲಿ ಕೈಮಗ್ಗ ಕಾರ್ಮಿಕರು, ಮಾರಾಟಗಾರರು, ಪವರ್ ಲೂಮ್ ಕಾರ್ಮಿಕರು, ಚಿಂದಿ ಆಯುವವರು, ಬೀಡಿ ಕಾರ್ಮಿಕರು, ಚಾಲಕರು ಸೇರಿದಂತೆ ಇತರರು ಸೇರಿದ್ದಾರೆ. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ಕುಟುಂಬಗಳ ಸಂತೋಷವೇ ನನ್ನ ದೊಡ್ಡ ಸಂಪತ್ತು ಎಂದು ಭಾವುಕರಾದರು. ‘ನಾನು ಈ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ನನ್ನ ಬಾಲ್ಯದಲ್ಲಿ ನನಗೂ ಇಂತಹ ಮನೆಯಲ್ಲಿ ವಾಸಿಸುವ ಅವಕಾಶ ಸಿಕ್ಕಿದ್ದರೆ ಎಂದು ನಾನು ಅಂದುಕೊಳ್ಳುತ್ತಿದ್ದೆ’ ಎನ್ನುವಾಗ ಮೋದಿ ಅವರ ಕಣ್ಣು ತುಂಬಿ ಬಂತು. ಜೊತೆಗೆ ಫಲಾನುಭವಿಗಳನ್ನುದ್ದೇಶಿಸಿ ಭಾವುಕರಾಗಿ ಈ ರೀತಿಯ ಅಭಿವೃದ್ಧಿ ಯೋಜನೆಗಳನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ ಎಂದರು. ಸೊಲ್ಲಾಪುರದ ಸಾವಿರಾರು ಬಡವರು, ಕೂಲಿಕಾರ್ಮಿಕರಿಗಾಗಿ ನಾವು ತೆಗೆದುಕೊಂಡಿದ್ದ ವಾಗ್ದಾನ ಇಂದು ನೆರವೇರುತ್ತಿರುವುದು ಸಂತಸ ತಂದಿದೆ
ಈ ಯೋಜನೆಗೆ ಶಂಕುಸ್ಥಾಪನೆ ಮಾಡಲು ನಾನು ಇಲ್ಲಿಗೆ ಬಂದ ದಿನವೇ ನಾನು ಶೀಘ್ರದಲ್ಲೇ ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ನಿಮ್ಮ ಮನೆಗಳ ಕೀಲಿಗಳನ್ನು ನೀಡಿದ್ದೇನೆ.ಇಂದು ಮೋದಿ ಈ ಗ್ಯಾರಂಟಿಯನ್ನು ಈಡೇರಿಸಿದ್ದಾರೆ. ನೆನಪಿಡಿ, ಮೋದಿ ಗ್ಯಾರಂಟಿ ಎಂದರೆ ‘ಗ್ಯಾರಂಟಿಯನ್ನು ಪೂರ್ಣಗೊಳಿಸುವ ಗ್ಯಾರಂಟಿ’!” ಎಂದು ಅವರು ಹೇಳಿದರು. ವೀಡಿಯೊವನ್ನು ಇಲ್ಲಿ ವೀಕ್ಷಿಸಿ- ಇದೇ ವೇಳೆ ಪಿಎಂ ಮೋದಿ ಅವರು ಜನವರಿ 22 ರಂದು ತಮ್ಮ ಮನೆಗಳನ್ನು ರಾಮ ಜ್ಯೋತಿಯಿಂದ ಬೆಳಗಿಸುವಂತೆ ಜನರನ್ನು ಒತ್ತಾಯಿಸಿದರು. “ಜನವರಿ 22 ರಂದು ಜನರು ಬೆಳಗಿಸುವ ರಾಮ ಜ್ಯೋತಿ ಅವರ ಜೀವನದಿಂದ ಬಡತನವನ್ನು ತೊಡೆದುಹಾಕಲು ಸ್ಫೂರ್ತಿಯಾಗಲಿದೆ” ಎಂದು ಅವರು ಹೇಳಿದರು..