ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ : ಕದ್ರಾ ಜಲಾಶಯದಿಂದ 6000 ಕ್ಯೂಸೆಕ್ಸ ನೀರು ನದಿಗೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಕಾರವಾರ ದಿಂದ ಭಟ್ಕಳದತನಕ ಮಳೆ ಮುಂದುವರಿದಿದೆ. ಘಟ್ಟದ ಮೇಲೆ ಶಿರಸಿ, ದಾಂಡೇಲಿಯಲ್ಲಿ ಮಳೆ ಬೀಳುತ್ತಲೇ ಇತ್ತು‌ ‌.ಕಾಳಿ ‌ನದಿಯ ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.

ಕದ್ರಾ ಅಣೆಕಟ್ಟಿನಲ್ಲಿ ಜಿಲ್ಲಾಡಳಿತ ನಿಗದಿ ಪಡಿಸಿದ ಎತ್ತರಕ್ಕೆ ಅಣೆಕಟ್ಟಲ್ಲಿ ನೀರು ಸಂಗ್ರಹ ತಲುಪಿದ ತಕ್ಷಣ ಕರ್ನಾಟಕ ಪವರ್ ಕಾರ್ಪೊರೇಷನ್ ಅಧಿಕಾರಿಗಳು ಅಣೆಕಟ್ಟಿನಿಂದ ನದಿಗೆ ನೀರು ಹರಿಸಿದರು. ಪ್ರವಾಹ ಬರದಂತೆ ತಪ್ಪಿಸಲು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಯಿತು.

ಶುಕ್ರವಾರ ಅಪರಾಹ್ನ 3.35 ಕ್ಕೆ ಕಾಳಿ ನದಿಯ ಕದ್ರಾ ಅಣೆಕಟ್ಟೆಯ 4 ಗೇಟ್ ಗಳನ್ನು ತೆರೆಯಲಾಗಿದ್ದು, 6000 ಕೂಸೆಕ್ಸ್ ನೀರನ್ನು ನದಿಗೆಬಿಡಲಾಯಿತು. ಇದರ ಜೊತೆಗೆ ಕದ್ರಾ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆಗಾಗಿ ಬಳಸಿದ 22000 ಕ್ಯೂಸೆಕ್ಸ್ ನೀರನ್ನು ಇಂದೇ ಹೊರಬಿಡಲಾಗಿದೆ.

ಕಾಳಜಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ‌:
ಮಳೆಯ ಕಾರಣ ಹೊನ್ನಾವರ ತಾಲ್ಲೂಕಿನಲ್ಲಿ ನೆರೆ ಮುಂದುವರಿದಿದೆ. ಕಾಳಜಿ ಕೇಂದ್ರಗಳಲ್ಲಿ 149 ಜನರು ಆಶ್ರಯಪಡೆದಿದ್ದಾರೆ. ಚಿಕ್ಕನಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆರೆ ಪ್ರದೇಶಗಳಲ್ಲಿ ತೆರೆದ ಕಾಳಜಿ ಕೇಂದ್ರಗಳಿಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಶುಕ್ರವಾರ ಭೇಟಿ ನೀಡಿದರು.

ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವವವರಿಗೆ ಯಾವುದೇ ಕೊರತೆಯಾಗದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲೆಲ್ಲಿ ಮಳೆ :
ಕಳೆದ 24 ತಾಸುಗಳಲ್ಲಿ
ಕಾರವಾರದಲ್ಲಿ ಅತೀ ಹೆಚ್ಚು ಮಳೆ ಶುಕ್ರವಾರ ಬೆಳಗಿನ ಜಾವ 8 ರ ಸಮಯಕ್ಕೆ 69.8 ಮಿಲಿ ಮೀಟರ್ ಮಳೆ ಸುರಿದಿತ್ತು , ಶಿರಸಿಯಲ್ಲಿ 21.6 ಹೊನ್ನಾವರ 50.4 , ಕುಮಟಾ 59.3 ಮಿಲಿ ಮೀಟರ್ ಮಳೆ ಸುರಿದಿದೆ. ಭಟ್ಕಳದಲ್ಲಿ 58.7 , ಅಂಕೋಲಾದಲ್ಲಿ 86.2 ,ಹಳಿಯಾಳದಲ್ಲಿ 8.9 ಸುಫಾದಲ್ಲಿ 52.9 ಯಲ್ಲಾಪುರದಲ್ಲಿ 25.0 ದಾಂಡೇಲಿಯಲ್ಲಿ 20.5 ಮಿಲಿ ಮೀಟರ್, ಮುಂಡಗೋಡದಲ್ಲಿ 4.2 ಮಿಲಿ ಮೀಟರ್ ಮಳೆ ಸುರಿದಿದೆ.

ಕಾಳಿ ನದಿಯ ಕದ್ರಾ ತುಂಬಿ ಹರಿಯುತ್ತಿದ್ದು, ಕಾಳಿ ನದಿಯ ದಡದ ಜನರು ಜಾಗ್ರತೆ ಯಿಂದ ಇರಲು ಕೆಪಿಸಿ ಮುನ್ಸೂಚನೆ ನೀಡಿದೆ. ಮಳೆ 24 ತಾಸು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರ ಹಗಲಿಡೀ‌ ಮಳೆ ಸುರಿಯುತ್ತಲೇ ಇದೆ. ಭಟ್ಕಳ ,ಹೊನ್ನಾವರ, ಕುಮಟಾ ತಾಲ್ಲೂಕಿನ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.
……

Latest Indian news

Popular Stories