ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಾಲಿಗೆ ಹರಿಬಿಟ್ಟ ಸಂಸದ ಹೆಗಡೆ | ಮಾಧ್ಯಮಗಳಿಗೆ ಬೇ…ರ್ಸಿಗಳೆಂದ ಹೆಗಡೆ

ಕಾರವಾರ : ಮಾಧ್ಯಮಗಳಿಗೆ ಬೇವರ್ಸಿ ಎಂದು ಸಂಸದ ಅನಂತ ಕುಮಾರ್ ಹೆಗಡೆ ನಾಲಿಗೆ ಹರಿಬಿಟ್ಟ ಘಟನೆ ಸೋಮವಾರ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದಿದೆ.

ಪಕ್ಷದ ಕಾರ್ಯಕರ್ತರ ಜೊತೆ ಮಾತನಾಡುತ್ತಾ ತನ್ನ ಕುರಿತಾಗಿ ಮಾಧ್ಯಮಗಳಲ್ಲಿ ಹಿಗ್ಗಾ ಮುಗ್ಗಾ ಟೀಕೆ ಬರುತ್ತಿರುವುದನ್ನು ಕಂಡು ಅನಂತ ಕುಮಾರ ಹೆಗಡೆ ಮಾಧ್ಯಮಗಳ ವಿರುದ್ಧವೇ ಆಕ್ರೋಶ ಹೊರ ಹಾಕಿದ್ದು ಬಯಲಾಗಿದೆ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಹೆಗಡೆ ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಇರಬೇಕು . ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ ,

ಬೇಕಾದ್ರೆ ಬೇವರ್ಸಿಗಳು ಏನೂ ಬೇಕಾದ್ರೂ ವದರಾಡಲಿ. ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದ ಚರ್ಚೆ ಆಗಲಿ.
ನಿವೆಲ್ಲ ಇದಕ್ಕೆ ವಿಚಲಿತರಾಗಬಾರದೆಂದ ಅನಂತ ಕುಮಾರ ಹೆಗಡೆ ಹೇಳಿ ತನ್ನ ಬಗ್ಗೆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗೆ ವಿಚಲಿತರಾದುದು ಕಂಡು ಬಂದಿದೆ.

ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ.
ಆನೆ ನಡಿತಾ ಇದ್ರೆ ನಾಯಿಗಳು ಬೋಗಳತಾ ಇರ್ತವೆ.
ಆನೆ ನಡಿತಾ ಇದ್ದರೆ ಯಾವಗಲಾದರೂ ನಾಯಿ ಕಡೆ ಗಮನ ಕೊಡುತ್ತಾ ?ನಾಯಿಗಳಿಗೂ ಗೊತ್ತು , ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡೊಕೆ ಆಗಲ್ಲ ಅಂತಾ.ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯ ಕ್ಕೆ ಬೆಲೆ ಇರಲ್ಲ ಎಂದು ಸಂಸದ ಹೆಗಡೆ ಬಾಯಿಗೆ ಬಂದಂತೆ ಮಾತಾಡಿರುವುದು ಬಯಲಿಗೆ ಬಂದಿದೆ.

ಸಂವಿಧಾನ ಬದಲಿಸುತ್ತೇವೆ ಎಂಬ ಬಗ್ಗೆ ಹೆಗಡೆ ಸಿದ್ದಾಪುರದ ಹಲಗೇರಿಯಲ್ಲಿ ಪುನರುಚ್ಚಾರ ಮಾಡಿದ್ದರು. ಇದು ಈಗ ಬಿಜೆಪಿ ಪಕ್ಷ ಹಾಗೂ ಕಾಂಗ್ರೆಸ್ ನಿಂದ ತೀವ್ರ ಟೀಕೆಗೆ ಗುರಿಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ , ಎನ್ ಡಿಎ ವಿರೋಧಿ ಪಕ್ಷಗಳು ಸಹ ಅನಂತ ಕುಮಾರ್ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ ಎಂದು ಟೀಕಿಸಿವೆ.

…..

Latest Indian news

Popular Stories