ಇಡಿ ಬಂಧನ’ ಪ್ರಶ್ನಿಸಿ ‘ಸುಪ್ರೀಂ ಕೋರ್ಟ್’ ಮೆಟ್ಟಿಲೇರಿದ ‘ಹೇಮಂತ್ ಸೊರೆನ್’: ನಾಳೆ ಅರ್ಜಿಯ ವಿಚಾರಣೆ

ನವದೆಹಲಿ:ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಂಧನದ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ನಡೆಸಲಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರ್ಖಂಡ್ ಸಿಎಂ ಸೊರೇನ್ ಅವರು ಇಡಿ ಬಂಧನದ ಭೀತಿಯಿಂದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು.ನಿನ್ನೆ ಇಡಿ ವಿಚಾರಣೆಗೆ ಹಾಜರಾಗಿದ್ದಂತ ಅವರನ್ನು, ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯದ ವಿಚಾರಣೆಯು ಬುಧವಾರ ಮಧ್ಯಾಹ್ನ ಅವರ ರಾಂಚಿ ನಿವಾಸದಲ್ಲಿ ಪ್ರಾರಂಭವಾಯಿತು. ಈ ವಿಚಾರಣೆಯ ಬಳಿಕ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರೋದಾಗಿ ತಿಳಿದು ಬಂದಿದೆ.

ತನಿಖಾ ಸಂಸ್ಥೆಯ ಅಧಿಕಾರಿಗಳು ಏಳು ಗಂಟೆಗಳಿಗೂ ಹೆಚ್ಚು ಕಾಲ ಅವರ ನಿವಾಸದಲ್ಲಿ ಬೀಡುಬಿಟ್ಟಿದ್ದರು. ಅವರ ನಿವಾಸದ ಒಳಗೆ ಮತ್ತು ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈಗ ಅಲ್ಲಿಗೆ ಉನ್ನತ ಅಧಿಕಾರಿಗಳಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ ಖಿಯಾಂಗೇಟ್ ಧಾವಿಸಿದ್ದಾರೆ.

Latest Indian news

Popular Stories