ನ.21 ರಂದು ಬೃಹತ್ ಅರಣ್ಯವಾಸಿಗಳ ಬೆಂಗಳೂರು ಚಲೋ : ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ

ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ.
ಕಾರವಾರ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು ಹಾಗೂ ನಿರ್ದಿಷ್ಟ ದಾಖಲೆಗಳಿಗೆ ಸಂಬಂಧಿಸಿ ಅರಣ್ಯ ಹಕ್ಕು ಕಾಯಿದೆ, ಬುಡಕಟ್ಟು ಮಂತ್ರಾಲಯದ ಆದೇಶ ಮತ್ತು ಗುಜರಾತ್ ಹೈಕೋರ್ಟ್ ಆದೇಶದಂತೆ ಮೂರು ತಲೆಮಾರಿನ ದಾಖಲೆಗೆ ಒತ್ತಾಯಿಸಬೇಡಿ ಎಂಬ ಬೇಡಿಕೆಯನ್ನಿಟ್ಟು ನ.31 ರಂದು ಬೃಹತ್ ಬೆಂಗಳೂರು ಚಲೋ ಯಾತ್ರೆ ಪ್ರೀಡಮಂ ಪಾರ್ಕನಲ್ಲಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ರವಿವಾರ ಕಾರವಾರ ಪತ್ರಿಕಾ ಭವನದಲ್ಲಿ ಹೋರಾಟದ ಬೇಡಿಕೆಯ ಪತ್ರವನ್ನು ಬೀಡುಗಡೆಗೊಳಿಸಿ ಪತ್ರಿಕಾಗೋಷ್ಠಿ ಮಾಡಿದರು.
26 ಎಪ್ರಿಲ್ 1978 ರ ಪೂರ್ವದ ಅರಣ್ಯ ಮಂಜೂರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ರಾಜ್ಯದಲ್ಲಿನ ಪ್ರಕರಣಗಳ ಅರಣ್ಯವಾಸಿಗಳ ಕುಟುಂಬಕ್ಕೆ ಶೀಘ್ರದಲ್ಲಿ ಹಕ್ಕು ಪತ್ರ ವಿತರಿಸಬೇಕು. ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಪೀಲ್‌ಗೆ ಮಾನ್ಯತೆ ನೀಡಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದರು. ಕರ್ನಾಟಕದಲ್ಲಿ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಂಚಿತರಾದ ಅರಣ್ಯವಾಸಿಗಳ ಕುಟುಂಬಕ್ಕೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದರು. ಅರಣ್ಯವಾಸಿಗಳ ಮೇಲೆ ಕಾನೂನು ಭಾಹಿರವಾಗಿ ಒಕ್ಕಲೆಬ್ಬಿಸುವ ಮತ್ತು ದೌರ್ಜನ್ಯ ಎಸಗುವ ಕ್ರಮ ಕೈಬಿಡಬೇಕೆಂಬ ಬೇಡಿಕೆಗಳನ್ನು ಇಟ್ಟು ಸರ್ಕಾರದ ಗಮನ ಸೆಳೆಯಲು ಬೆಂಗಳೂರು ಚಲೋ ಮಾಡುತ್ತಿರುವುದಾಗಿ ಅವರು ಹೇಳಿದರು.
ಅರಣ್ಯ ಪಕ್ಕ ಜನಸವತಿ ಪ್ರದೇಶದ ಅತಿಕ್ರಮಣ ಇದ್ದರೆ, ದೇವಸ್ಥಾನ, ಬಾವಿ, ಹಳೆಯ ಕಟ್ಟಡದ ಸಾಂದರ್ಭಿಕ ಸಾಕ್ಷ್ಯ, ಊರಿನ ಹಿರಿಯ ವ್ಯಕ್ತಿಯ ಹೇಳಿಕೆ ಆಧರಿಸಿ ಭೂಮಿಯ ಸಾಗುವಳಿಯ ಪತ್ರ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ .ಇದನ್ನೇ ಬುಡಕಟ್ಟು ಸಚಿವಾಲಯ ಹೇಳಿದೆ. ಒಂದು ತಲೆಮಾರಿನ ದಾಖಲೆ ಬೇಕು ಎಂಬ ಕಾನಯ ತಿದ್ದುಪಡಿ ಅವಶ್ಯಕತೆ ಸಹ ಇಲ್ಲ ಎಂದು ರವೀಂದ್ರ ನಾಯ್ಕ ವಿವರಿಸಿದರು. ಸಚಿವಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸುವ ಅರಣ್ಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಸಮಸ್ಯೆ ಹಾಗೆ ಉಳಿದಿದೆ ಎಂದರು. 2013ರಲ್ಲಿ ಬುಡಕಟ್ಟು ಸಚಿವಾಲಯದ ಆದೇಶ ಇಟ್ಟುಕೊಂಡೇ 250 ಜನರಿಗೆ ಸಾಗುವಳಿ ಪತ್ರವನ್ನು ಅಂದಿನ ಸಚಿವ ದೇಶಪಾಂಡೆ ನೀಡಿದ್ದಾರೆ. ಎಚ್ಕೆ ಪಾಟೀಲರು ಗದಗ ಜಿಲ್ಲೆಯಲ್ಲಿ 1100 ಜನರಿಗೆ ಅರಣ್ಯ ಹಕ್ಕು ಪತ್ರ ನೀಡಿದ್ದಾರೆ. ಹೀಗಿರುವಾಗ ಈಗ ಅದು ಏಕೆ ಸಾಧ್ಯವಿಲ್ಲ ಎಂದು ರವಿಂದ್ರ ನಾಯ್ಕ ಪ್ರಶ್ನಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕರಾದ ರಾಜೇಶ ಮಿತ್ರ ನಾಯ್ಕ, ಅಂಕೋಲಾ ಜಿಲ್ಲಾ ಸಂಚಾಲಕರಾದ ವಿಜು ಪೀಟರ್ ಪಿಳ್ಳೆ, ಅರವಿಂದ ಗೌಡ ಮತ್ತು ರಾಜೀವ ಹರಿಕಾಂತ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
……