ಪೊಲೀಸ್ ಇಲಾಖೆಯ ನೌಕರನಿಂದ ಅಕ್ರಮ ಮದ್ಯ ಸಾಗಟ : ಗೋಕರ್ಣ ಪೋಲೀಸರಿಂದ ಪತ್ತೆ

ಕಾರವಾರ : ಪೊಲೀಸ್ ಇಲಾಖೆಯ ನೌಕರನೋರ್ವ ಕಾರಿನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿದ್ದ ವೇಳೆ, ಗೋಕರ್ಣ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಗೋಕರ್ಣದ ಓಂ ಬೀಚ್ ಬಳಿ ನಡೆದಿದೆ.
ಸಿಕ್ಕಿಬಿದ್ದ ಪೊಲೀಸ್ ನೌಕರ ಕಾರಿನಲ್ಲಿ ಅಂದಾಜು 50 ಸಾವಿರ ಬೆಲೆಯ ಅಕ್ರಮ ಗೋವಾ ಮದ್ಯವನ್ನು ಗೋಕರ್ಣದಲ್ಲಿರುವ ಕೆಲವು ರೆಸಾರ್ಟ್ ಹಾಗೂ ಹೋ ಸ್ಟೇಗಳಿಗೆ ಪೊರೈಕೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟವಾಗುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ತಿಳಿದ ಗೋಕರ್ಣ ಪೊಲೀಸರು ಕಾರನ್ನ ತಡೆಯಲು ಹೋದ ಸಮಯದಲ್ಲಿ ಆತ ಕರ್ತವ್ಯದಲ್ಲಿದ್ದ ಪೊಲೀಸರ ಕಾರ್ಯಚರಣೆಗೆ ಅಡ್ಡಿ ಮಾಡಿದ ಎನ್ನಲಾಗುತ್ತಿದೆ.

ಅಕ್ರಮ ಮದ್ಯ ಸಾಗಾಟದಲ್ಲಿ ಸಿಕ್ಕಿಬಿದ್ದ ಪೊಲೀಸ್ ಪೇದೆ ಕದ್ರಾ ಠಾಣೆಯಲ್ಲಿ ಕರ್ತವ್ಯದಲ್ಲಿರುವುದಾಗಿ ತಿಳಿದು ಬಂದಿದೆ. ಕೆಲಮೊಮ್ಮೆ ಯುನಿಫಾರ್ಮ ಮೇಲೆಯೇ ಕಾರನಲ್ಲಿ ಲಕ್ಷಾಂತರ ರೂಪಾಯಿ ಗೋವಾ ಮದ್ಯವನ್ನು ಜಿಲ್ಲೆಯ ಬೇರೆ ಬೇರೆ ಕಡೆಗೆ ಸಾಗಾಟ ಮಾಡುವ ದಂಧೆ ನಡೆಸುತ್ತಿರುವುದು ಈ ಘಟನೆಯ ನಂತರದಲ್ಲಿ ಬಹಿರಂಗವಾಗಿದೆ‌.
ಸದ್ಯ ಈ ಬಗ್ಗೆ ಗೋಕರ್ಣ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗುತ್ತಿದೆ ಎಂದು ಗೋಕರ್ಣ ಪಿಎಸ್ ಐ ಖಚಿತಪಡಿಸಿದ್ದಾರೆ.
……

Latest Indian news

Popular Stories