Featured StoryUttara Kannada

ಭಾರತೀಯ ನೌಕಾಪಡೆಗೆ ಐಎನ್‌ಎಸ್‌ವಿ ಕೌಂಡಿನ್ಯ ಸೇರ್ಪಡೆ: ಭಾರತದ ಕಡಲ ಪುನರುಜ್ಜೀವನದಲ್ಲಿ ಒಂದು ಐತಿಹಾಸಿಕ ಹೆಜ್ಜೆ

ಕಾರವಾರ(ನೌಕಾನೆಲೆ): ಭಾರತೀಯ ನೌಕಾಪಡೆಗೆ ಐಎನ್‌ಎಸ್‌ವಿ ಕೌಂಡಿನ್ಯ ನೌಕೆಯನ್ನು ಐಎನ್ ಎಸ್ ಕದಂಬ ನೌಕಾನೆಲೆಯ ತಾಣದಲ್ಲಿ ಬುಧುವಾರ ಸೇರ್ಪಡೆ ಮಾಡಲಾಯಿತು.

ಕೇಂದ್ರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೌಂಡಿನ್ಯವನ್ನು ಭಾರತೀಯ ನೌಕಾಪಡೆಗೆ ಸೇರಿಸುವ ಕಾರ್ಯಕ್ಕೆ ಹಸಿರು ನಿಶಾನೆ ತೋರಿದರು.ಈ ಸಂದರ್ಭದಲ್ಲಿ ವೈಸ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್ ಕರ್ನಾಟಕ ನೌಕಾ ಪ್ರದೇಶದ ಧ್ವಜಾಧಿಕಾರಿ ರಿಯರ್ ಅಡ್ಮಿರಲ್ ಕೆ.ಎಂ. ರಾಮಕೃಷ್ಣನ್ ಸಮ್ಮುಖದಲ್ಲಿ, ಐಎನ್‌ಎಸ್‌ವಿ ಕೌಂಡಿನ್ಯ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು.

ಸಂಪ್ರದಾಯಿಕ ನೌಕೆ ಕೌಂಡಿನ್ಯವನ್ನು
ಹಲಗೆ ಮತ್ತು ತೆಂಗಿನ ನಾರು ಬಳಸಿ ಹೊಲಿಯಲಾಗಿದೆ.

ಕೌಂಡಿನ್ಯದ ಹಿನ್ನೆಲೆ :
5 ನೇ ಶತಮಾನದ ಅಜಂತಾ ಗುಹೆಯ ವರ್ಣಚಿತ್ರದಿಂದ ಸ್ಫೂರ್ತಿ ಪಡೆದ ಈ ವಿಶಿಷ್ಟ ಹಡಗು ಪ್ರಾಚೀನ ಸಮುದ್ರಯಾನ ಸಂಪ್ರದಾಯವನ್ನು ಆಧುನಿಕ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ.

ಈ ಹಡಗಿಗೆ ಹಿಂದೂ ಮಹಾಸಾಗರದಿಂದ ಆಗ್ನೇಯ ಏಷ್ಯಾಕ್ಕೆ ಪ್ರಯಾಣ ಬೆಳೆಸಿದ ಪೌರಾಣಿಕ ಭಾರತೀಯ ನಾವಿಕ ಮತ್ತು ಸನ್ಯಾಸಿಯಾಗಿದ್ದ ಕೌಂಡಿನ್ಯ ಅವರ ಹೆಸರನ್ನು ಇಡಲಾಗಿದೆ. ಇದು ಭಾರತದ ಸಾಗರ ವಿನಿಮಯದ ಪ್ರಾಚೀನ ಸಂಪ್ರದಾಯಗಳು, ಸಮುದ್ರಯಾನ, ಐತಿಹಾಸಿಕ ಹೆಜ್ಜೆಯನ್ನು ಸಂಕೇತಿಸುತ್ತದೆ.

ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಗೋವಾದ ಮೆ/ಎಸ್ ಹೊಡಿ ಇನ್ನೋವೇಶನ್ಸ್ ನಡುವಿನ ತ್ರಿಪಕ್ಷೀಯ ಸಹಯೋಗದ ಮೂಲಕ ಕೌಂಡಿನ್ಯ ನೌಕೆ ನಿರ್ಮಿಸಲಾಗಿದೆ.

ಸಾಂಪ್ರದಾಯಿಕ ತೆಂಗಿನ ನಾರಿನ ಹೊಲಿಗೆ ತಂತ್ರಗಳನ್ನು ಬಳಸಿ ಮಾಸ್ಟರ್ ಶಿಪ್ ರೈಟ್ ಶ ಬಾಬು ಶಂಕರನ್ ನಿರ್ಮಿಸಿದ ಈ ಹಡಗನ್ನು ಫೆಬ್ರವರಿ 2025 ರಲ್ಲಿ ಪಯಣಕ್ಕೆ ತಯಾರು ಮಾಡಲಾಯಿತು. ಭಾರತೀಯ ನೌಕಾಪಡೆ ಮತ್ತು ಐಐಟಿ ಮದ್ರಾಸ್ ಹಡಗಿನ ವಿನ್ಯಾಸ ಬಳಸಿ ಸಮುದ್ರ ಪಯಣಕ್ಕೆ ಸಿದ್ಧ ಮಾಡಲಾಗಿದೆ.

ಗಂಡಭೇರುಂಡ ಮತ್ತು ಸಿಂಹ ಮುಖದ ವಿಶಿಷ್ಟ ಲಕ್ಷಣಗಳಿಂದ ಅಲಂಕರಿಸಲ್ಪಟ್ಟ ಕೌಂಡಿನ್ಯ , ಹರಪ್ಪಾ ಶೈಲಿಯ ಲಂಗರು ಹೊಂದಿದೆ. ಕೌಂಡಿನ್ಯ ಭಾರತದ ಕಡಲ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಈ ಹಡಗು ಶೀಘ್ರದಲ್ಲೇ ಪ್ರಾಚೀನ ವ್ಯಾಪಾರ ಮಾರ್ಗಗಳಲ್ಲಿ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದ್ದು, ಭಾರತದ ಸಾಗರ ಪರಂಪರೆ ಮತ್ತು ನಾಗರಿಕತೆಯ ವ್ಯಾಪ್ತಿಯನ್ನು ಪುನರುಚ್ಚರಿಸಲಿದೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button