ಅನಂತ್ ಕುಮಾರ್ ಹೆಗಡೆ ಜಿಲ್ಲೆಯಿಂದ ಸಂಸದ ಆಗಿರುವುದೇ ದುರಂತ ;ಜಿಲ್ಲೆಯಿಂದ ಗಡಿಪಾರು ಮಾಡಲು ಆಗ್ರಹ : ಭಾಸ್ಕರ ಪಟಗಾರ

ಕಾರವಾರ : ಅನಂತ್ ಕುಮಾರ್ ಹೆಗಡೆ ಜಿಲ್ಲೆಯಿಂದ ಸಂಸದ ಆಗಿರುವುದೇ ದುರಂತ ಎಂದು ಕೆಪಿಸಿಸಿ ಸಂಯೋಜಕ , ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ವಿಷಾಧ ವ್ಯಕ್ತಪಡಿಸಿದ್ದಾರೆ.

ಕಾರವಾರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅನಂತ್ ಕುಮಾರ್ ಹೆಗಡೆ ಮಾದ್ಯಮದವರನ್ನ ಬೇವರ್ಸಿ ಎನ್ನುತ್ತಾರೆ. ಅವರು ನೀಚ ಸಂಸ್ಕೃತಿಯ ಸಂಸದ ಎಂದು ಕಿಡಿಕಾರಿದ್ದರು. ಅನಂತ್ ಕುಮಾರ್ ಹೆಗಡೆ ಒಬ್ಬ ಬೇವರ್ಸಿ ಸಂಸದ , ನಾಲಾಯಕ್ ಸಂಸದ ಎಂದು ಟೀಕಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಹಲವು ಯೋಜನೆ ಇದ್ದು , ಹೆದ್ದಾರೆ ಕಾಮಗಾರಿ ಹತ್ತು ವರ್ಷವಾದರೂ ಮುಗಿದಿಲ್ಲ. ಆದರೆ ಟೂಲ್ ಸಂಗ್ರಹ ಮಾಡಲಾಗುತ್ತಿದೆ. ಈ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಉದಾಹರಣೆಯಿಲ್ಲ. ನಾಲಾಯಕ್ ಸಂಸದನಿಗೆ ಜಿಲ್ಲೆಯ ಯುವಕರಿಗೆ ಉದ್ಯೋಗ ಕೊಡಿಸುವ ತಾಕತ್ತು ಇಲ್ಲ. ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬಂದಾಗ ಅಲ್ಲಿಗೆ ಸೌಜನ್ಯಕ್ಕೂ ಬರದ ಸಂಸದ ಇವರು. ಮೊದಲು ಹೆಗಡೆಯನ್ನ ಜಿಲ್ಲೆಯಿಂದ ಗಡಿಪಾರು ಮಾಡಲಿ, ಬಿಜೆಪಿ ತನ್ನ ಪಕ್ಷದಿಂದ ಉಚ್ಚಾಟಿಸಲಿ ಎಂದು ಆಗ್ರಹಿಸಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅನಂತ್ ಕುಮಾರ್ ಹೆಗಡೆ ಮಾತನಾಡುತ್ತಾರೆ. ಇಂತಹ ಸಂಸದ ಜಿಲ್ಲೆಗೆ , ದೇಶಕ್ಕೆ ಬೇಕಾಗಿಲ್ಲ. ಅರಳು ಮರಳಾಗಿ ಬೇಕಾಬಿಟ್ಟಿ ಹೇಳಿಕೆಯನ್ನ ಅನಂತ್ ಕುಮಾರ್ ಹೆಗಡೆ ನೀಡುತ್ತಿದ್ದಾರೆ. ಬಿಜೆಪಿ ಅನಂತ್ ಕುಮಾರ್ ಹೆಗಡೆಗೆ ಟಿಕೇಟ್ ನೀಡಬಾರದು. ಒಂದೊಮ್ಮೆ ಟಿಕೇಟ್ ನೀಡಿದರೆ ಸಂವಿಧಾನ ಬದಲಿಸುವ ಹೇಳಿಕೆಗೆ ನೀವು ಬದ್ಧರಿದ್ದೀರಿ ಎನ್ನುವುದು ತೋರಿಸುತ್ತದೆ ಎಂದು ಭಾಸ್ಕರ್ ಪಟಗಾರ್ ಹೇಳಿದರು.
……

Latest Indian news

Popular Stories