ಕಾರವಾರ: ವಿದೇಶಿ ಮಹಿಳೆ ಗೋಕರ್ಣದಿಂದ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಕಾಣೆಯಾದ ಪ್ರಜೆ ಜಪಾನ್ ದೇಶದವಳು ಎಂದು ತಿಳಿದು ಬಂದಿದೆ.
ಎಮಿ ಯಮಾಝಕಿ(40) ನಾಪತ್ತೆಯಾದ ಮಹಿಳೆ. ಈಕೆ ಪತಿಯ ಜೊತೆಗೆ ಜಪಾನ್ ದೇಶದಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಬಂಗ್ಲೆ ಗುಡ್ಡೆಯ ವಸತಿಗೃಹದಲ್ಲಿ ಉಳಿದುಕೊಂಡಿದ್ದರು. ವಸತಿಗೃಹದಲ್ಲಿದ್ದ ಎಮಿ ಪತಿಯ ಬಳಿ ಹೊರಗೆ ಹೋಗಿ ಬರುವುದುದಾಗಿ ವಸತಿಗೃಹದಿಂದ ಹೋದವಳು ವಾಪಸ್ ಬರದೆ ಕಾಣೆಯಾಗಿದ್ದಾಳೆ. ಧಾರ್ಮಿಕ ಮತ್ತು ಬೀಚ್ ಪ್ರವಾಸಿ ತಾಣ ಗೋಕರ್ಣ ಈಗಾಗಲೇ ಮಾದಕ ದ್ರವ್ಯಗಳ ಜಾಲದಿಂದ ಕುಖ್ಯಾತಿ ಸಹ ಪಡೆದುಕೊಂಡಿದೆ. ಮಾದಕ ದ್ರವ್ಯ ವ್ಯಸನಿಗಳು ಮಹಿಳೆಯನ್ನು ಕಿಡ್ಯಾಪ್ ಮಾಡಿರಬಹುದೇ ? ಅಥವಾ ಕೃತ್ಯಕ್ಕೆ ಮಹಿಳೆ ಬಲಿಯಾಗಿರಬಹುದೇ ಎಂಬ ಆತಂಕವೂ ಕಾಡತೊಡಗಿದೆ. ಜಪಾನ್ ವಿದೇಶಿ ರಾಯಭಾರಿ ಕಚೇರಿಯಿಂದ ಈಗಾಗಲೇ ರಾಜ್ಯ ಪೊಲೀಸರನ್ನು ಸಂಪರ್ಕ ಮಾಡಿದ್ದು, ಎಮಿ ಯಮಾಝಿಕಿ ಪತ್ತೆಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಮಹಿಳೆಯ ಪತಿ ದೈ ಯಮಾಝೀಕಿ ಯಿಂದ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ನಾಪತ್ತೆಯಾಗಿರುವ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.