ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆಜಿಲ್ಲಾಡಳಿತದಿಂದ ಚಿತ್ತಾಕುಲದ 11 ಎಕರೆ ಜಮೀನು ಹಸ್ತಾಂತರ – ಶಾಸಕ ಸತೀಶ ಸೈಲ್

ಕಾರವಾರ : ಉತ್ತರ ಕನ್ನಡ ಜಿಲ್ಲಾಡಳಿತವು ಚಿತ್ತಾಕುಲ ಸರ್ವೆ ಸಂಖ್ಯೆ 1144 ಅ ದಲ್ಲಿಯ11ಎಕರೆ 34 ಗುಂಟೆ ಎಕರೆ ಜಾಗವನ್ನು
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಫೆ. 29.ರಂದು ಹಸ್ತಾಂತರ ಮಾಡಲಿದೆ ಎಂದು ಕಾರವಾರ ಶಾಸಕ ಸತೀಶ ಕೆ. ಸೈಲ್ ಹೇಳಿದ್ದಾರೆ.

ಕ್ರಿಕೆಟ್ ಆಸೋಶಿಯೇಷನ್ ಗೆ ಭೂಮಿ ಹಸ್ತಾಂತರದ ಬಗ್ಗೆ ಮಾಧ್ಯಮಗಳಿಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಕಾಳಿ ನದಿಯ ದಡದಲ್ಲಿ ನಿರ್ಮಾಣವಾಗುವುದು ಹರ್ಷ ತಂದಿದೆ ಎಂದಿದ್ದಾರೆ.

ಕ್ರಿಕೆಟ್ ಮೈದಾನ ನಿರ್ಮಾಣ ಕುರಿತು 28.12.2018 ರಂದು ಅಂದಿನ ಸರಕಾರವು ಚಿತ್ತಾಕುಲ ಗ್ರಾಮದ ಸರ್ವೆ ಸಂಖ್ಯೆ 1144 (ಅ)ದಲ್ಲಿ 11.34 ಎಕರೆ ಗೋಮಾಳ ಜಮೀನನ್ನು ಗೋಮಾಳ ಶೀರ್ಷಿಕೆ ಯಿಂದ ತೆಗೆದು ಹಾಕಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ವಾರ್ಷಿಕ ಬಾಡಿಗೆ ಆಧಾರದಲ್ಲಿ ನೀಡಲು ಆದೇಶ ಮಾಡಿತ್ತು.

ತದನಂತರ ಜಿಲ್ಲಾಡಳಿತ ಮತ್ತು ಕೆ .ಎಸ್ .ಸಿ. ಎ. ಮಧ್ಯೆ ಇದಕ್ಕೆ ಬೇಕಾಗಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪರಸ್ಪರ ಸಭೆ ನಡೆಸಿ ಸಂಪೂರ್ಣಗೊಳುಸಿರುವರು.2013 ರಿಂದ 2018 ರ ಅವಧಿಯಲ್ಲಿ ಶಾಸಕರಾಗಿದ್ದ ಇಂದಿನ ಶಾಸಕ ಸತೀಶ್ ಸೈಲ್ ಅವರು ತನ್ನ ಅಂದಿನ ಅವಧಿಯಲ್ಲಿ ಸರಕಾರದ ಮೇಲೆ ಒತ್ತಡ ತಂದು ಗಡಿ ಪ್ರದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಒತ್ತಾಯಿಸಿದ್ದರು.

ಸಮುದ್ರ ಮತ್ತು ಕಾಳಿ ನದಿಯ ಸಂಗಮ ಪ್ರದೇಶದ ಗುಡ್ಡದ ರಮಣೀಯ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿದರೆ, ಈ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲು ಸಹಾಯಕ ಎಂದಿದ್ದರು.

ಈ ಕಾರ್ಯಕ್ರಮ ಸಲ್ಲಿ ಶಾಸಕ ಸತೀಶ ಸೈಲ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ ಅಧ್ಯಕ್ಷ, ಮಾಜಿ ಟೆಸ್ಟ್ ಆಟಗಾರ ರಘುರಾಮ ಭಟ್,ಎಂ ಎಸ್ ವಿನಯ್ ,ನಿಖಿಲ್ ಭೂಷಡ್ ಹಾಗೂ ಮ್ಯಾನೇಜಿಂಗ್ ಕಮಿಟಿ ಸದಸ್ಯರುಗಳು ಹಾಜರಿದ್ದು ಕೆ. ಎಸ್. ಸಿ. ಎ. ಪರವಾಗಿ ಜಿಲ್ಲಾಡಳಿತದಿಂದ ಜಮೀನು ಸ್ವೀಕರಿಸುವರು.
…..

Latest Indian news

Popular Stories