ಕಾರವಾರ: ರಾಷ್ಟ್ರೀಯ ಲೋಕ ಅದಾಲತ್ ರಾಜಿ ಸಂಧಾನದಲ್ಲಿ 33,547 ಪ್ರಕರಣಗಳು ಇತ್ಯರ್ಥ

ಕಾರವಾರ : ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಮಾ. 16 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.

ಜಿಲ್ಲೆಯಾದ್ಯಂತ ಒಟ್ಟ 30 ಪೀಠಗಳಲ್ಲಿ 28,765 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 4782 ಪ್ರಕರಣಗಳಲ್ಲಿ ಸೇರಿದಂತೆ ಒಟ್ಟ 33,547 ಪ್ರಕರಣಗಳು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಮಾಡಲಾಯಿತು. ಹಾಗೂ ಈ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಸಾಲ ಮರುಪಾವತಿ, ಪರಿಹಾರ, ದಂಡ ಹಾಗೂ ಇತ್ಯಾದಿ ಹಣಕಾಸಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ರೂ 50,72,20,712 ಹಣ ಸಂಗ್ರಹ ಮತ್ತು ಸಂಬಂಧಿತರಿಗೆ ಪಾವತಿ ಮಾಡಲಾಯಿತು.

ಒಂದಾದ ಮೂರು ಜೋಡಿಗಳು :
ವಿಶೇಷವಾಗಿ ಪತಿ ಪತ್ನಿ ಕಲಹಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಮೆಟ್ಟಿಲು ಏರಿದ 3 ಜೊಡಿಗಳು ಒಟ್ಟಿಗೆ ಜೀವನ ನಡೆಸಲ ಒಪ್ಪಿಕೊಂಡು , ಕೂಡಿ ಬಾಳುವ ಒಳ್ಳೆಯ ಬೆಳವಣಿಗೆಯು ಕೂಡ ನ್ಯಾಯಾಲಯದ ಲೋಕ ಅದಾಲತನಲ್ಲಿ ನಡೆಯಿತು.

ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಸುಮಾರು 47 ವರ್ಷ ಹಳೆಯದಾದ , ಕುಟುಂಬದ ಆಸ್ತಿ ವಿಭಜನೆಯ ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿರುವುದು ವಿಶೇಷವಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್. ವಿಜಯಕುಮಾರ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ .ಡಿ. ರಾಯ್ಕರ್ ತಿಳಿಸಿದ್ದಾರೆ.
…….

Latest Indian news

Popular Stories