ಕಾರವಾರ: ಠಾಣೆ ಎದುರೇ ಬೆಂಕಿ ಹಾಕಿಕೊಂಡ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕಾರವಾರ : ಜೊಯಿಡಾ ತಾಲ್ಲೂಕಿನ ರಾಮನಗರ ಠಾಣೆ ಪಿ.ಎಸ್.ಐ ನಿಂದ ಮಾನಸಿಕ ಕಿರುಕುಳ ಆರೋಪ ಹೊರಿಸಿ ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟ‌ನೆ ನಡೆದಿದೆ .

ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಆತ್ಮಹತ್ಯೆ ಗೆ ಯತ್ನಿಸಿದ ಯುವಕ.

ಜೂಜಾಟ ಆರೋಪದಡಿ ತನ್ನ ಮಾವನ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ರಾಮನಗರ ಪಿ.ಎಸ್.ಐ ಬಸವರಾಜ್ ಮಾಗನೂರು ಅವರ ಬಳಿ ವಿಚಾರಿಸಲು ತೆರಳಿದ್ದ.

ನಿನ್ನೆ ದಿನ ತನ್ನ ಮಾವನ ಜಾಮೀನು ವಿಚಾರದಲ್ಲಿ ವಿಚಾರಿಸಲು ಆತ ತೆರಳಿದ್ದ. ಯುವಕ
ಮದ್ಯ ಸೇವಿಸಿ ಬೈಕ್ ನಲ್ಲಿ ಠಾಣೆಗೆ ತೆರಳಿದ್ದ ಕಾರಣ ,ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣಕ್ಕೆ ಮುಂದಾದರು ಎನ್ನಲಾಗಿದೆ.
ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ ಐ ಸೂಚಿಸಿದರು ಎನ್ನಲಾಗಿದೆ .ಇದರಿಂದ ನೊಂದ ಯುವಕ ,ತನಗೆ ಮಾನಸಿಕ ಕಿರುಕುಳ ನೀಡುತಿದ್ದಾರೆ ಎಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ ‌. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪೊಲೀಸರು ಆತನ ರಕ್ಷಣೆಗೆ ಮುಂದಾದರು. ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ .

ಈ ಮಧ್ಯೆ ಪಿ.ಎಸ್.ಐ ವಿರುದ್ಧಮಾನಸಿಕ ಕಿರುಕುಳದ ವಿಡಿಯೋ ಮಾಡಿದ್ದಾ‌ನೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಭಾಸ್ಕರ್ ನನ್ನು ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ.
…..

Latest Indian news

Popular Stories