ಕಾರವಾರ: ಕಡಲ ತೀರದ ಗುಡಿಸಲು ತೆರವಿಗೆ ನೋಟೀಸ್ : ತೀರ ವಾಸಿಗಳಿಂದ ಅಸಮಾಧಾನ

ಕಾರವಾರ: ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಮೀನುಗಾರರ ಕೆಲ ಗುಡಿಸಲು ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ನೊಟೀಸ್ ನೀಡಿದ್ದಕ್ಕೆ ಮೀನುಗಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.

1001352151 Uttara Kannada

ಅಸಮಾಧಾನದ ಬರುತ್ತಿದ್ದಂತೆ ಬುಧವಾರ ಗುಡಿಸಲುಗಳ ತೆರವಿಗೆ ಮುಂದಾಗಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ವಾಪಸ್ಸಾದರು.

ಕಡಲತೀರದಲ್ಲಿರುವ ಐ.ಎನ್.ಎಸ್.ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಉದ್ಯಾನಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಮೀನುಗಾರರ ಮೂರು ಗುಡಿಸಲು ತೆರವುಗೊಳಿಸುವಂತೆ ವಾರದ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ನೊಟೀಸ್‍ನ್ನು ಗುಡಿಸಲುಗಳ ಬಾಗಿಲಿಗೆ ಅಂಟಿಸಿ ಹೋಗಿದ್ದರು.

ಬುಧವಾರ ಪೊಲೀಸ್ ಬಂದೋಬಸ್ತಿನೊಂದಿಗೆ ಗುಡಿಸಲು ತೆರವಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾದರು.
ಈ ವೇಳೆ ಮೀನುಗಾರ ಸಮುದಾಯದ ಮಹಿಳೆಯರು ಸೇರಿದಂತೆ ಹತ್ತಾರು ಜನರು ಸ್ಥಳದಲ್ಲಿ ಸೇರಿ ಗುಡಿಸಲು ತೆರವು ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಸ್ಥಳಕ್ಕೆ ಭೇಟಿ ನೀಡಿ ಗುಡಿಸಲು ತೆರವುಗೊಳಿಸಿದಂತೆ ಪಟ್ಟು ಹಿಡಿದರು. ಮೀನುಗಾರರು ವಸತಿಗೆ ಗುಡಿಸಲು ಬಳಸುತ್ತಿಲ್ಲ. ಮೀನುಗಾರಿಕೆ ಪರಿಕರಗಳನ್ನಿಡಲು ತಾತ್ಕಾಲಿಕವಾಗಿ ಕಟ್ಟಿಕೊಂಡಿದ್ದಾರೆ. ಪರಿಕರದ ಆಶ್ರಯ ಗುಡಿಸಲು ಹಾಳು ಮಾಡುವುದು ಸರಿಯಲ್ಲ ಎಂದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ನಿಶ್ಚಲ್ ನೊರೋನಾ, ಯುದ್ಧನೌಕೆ ಹಿಂಭಾಗದಲ್ಲಿದ್ದ ಅನಧಿಕೃತ ಗುಡಿಸಲುಗಳನ್ನು ತೆರವುಗೊಳಿಸಲು ಸೂಚಿಸಲಾಗಿತ್ತು. ಸಿಬ್ಬಂದಿ ಗೊಂದಲದಲ್ಲಿ ಮೀನುಗಾರರ ಗುಡಿಸಲಿಗೆ ನೊಟೀಸ್ ಅಂಟಿಸಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಅಲ್ಲದೇ ಸ್ಥಳದಿಂದ ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿಯನ್ನು ವಾಪಸ್ ಕಳಿಸಿದರು.

ಯುದ್ಧನೌಕೆಯ ಹಿಂಭಾಗದಲ್ಲಿ ಯಾವ ಗುಡಿಸಲೂ ಇಲ್ಲ. ಅಧಿಕಾರಿಗಳು ಮೀನುಗಾರರ ಆಕ್ರೋಶಕ್ಕೆ ಹೆದರಿ ದಿಕ್ಕು ತಪ್ಪಿಸುವ ಕೆಲಸ ನಡೆಸುತ್ತಿದ್ದಾರೆ. ಗುಡಿಸಲು ತೆರವುಗೊಳಿಸಲು ಮತ್ತೆ ಪ್ರಯತ್ನಿಸಲಿದ್ದಾರೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಕಡಲತೀರದ ಗುಡಿಸಲು ತೆರವು:
ಕಡಲತೀರದ ರಾಕ್ ಗಾರ್ಡನ್ ಸಮೀಪದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಕುಸುಮಾ ಕುಡ್ತಲಕರ ಎಂಬುವವರನ್ನು ಕಂದಾಯ ಅಧಿಕಾರಿಗಳು ಒಕ್ಕಲೆಬ್ಬಿಸಿದರು. ಈ ಹಿಂದೆ ಇದೇ ಪ್ರದೇಶದಲ್ಲಿದ್ದ ಗುಡಿಸಲು ತೆರವುಗೊಳಿಸಿದ್ದರೂ, ಕುಸುಮಾ ಕುಟುಂಬ ಮಾತ್ರ ಅಲ್ಲಿಯೇ ವಾಸವಿತ್ತು. ಹಲವು ಬಾರಿ ಅವರಿಗೆ ನೊಟೀಸ್ ಕೂಡ ನೀಡಿದ್ದರು. ಆದರೆ ಅವರು ಅದಕ್ಕೆ ಜಗ್ಗಿರಲಿಲ್ಲ.
….

Latest Indian news

Popular Stories