ಕಾರವಾರ | ದೇವಭಾಗದಲ್ಲಿ ಆಲೀವ್ ರಿಡ್ಲೆ ಆಮೆ ಮರಿಗಳ ಜನನ :ಕಡಲು ಸೇರಿದ ಆಮೆ ಮರಿಗಳು

ಕಾರವಾರ : ಇಲ್ಲಿಗೆ ಸನಿಹದ ದೇವಭಾಗ್ ಕಡಲ ತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆ ಮೊಟ್ಟೆ ಗಳಿಂದ 47 ಆಮೆ ಮರಿಗಳ ಜನನವಾಗಿದ್ದು, ಆಮೆ ಮರಿಗಳನ್ನು ಮಂಗಳವಾರ ಬೆಳಿಗ್ಗೆ ದೇವಭಾಗ ಕಡಲಿಗೆ ಬಿಡಲಾಯಿತು.

ದೇವಭಾಗ ಕಡಲತೀರದಲ್ಲಿ 2024 ನೇ ವರ್ಷದಲ್ಲಿ ಮೊದಲ ಕಡಲಾಮೆ ಮರಿಗಳ ತಂಡ ಮೊಟ್ಟೆಯಿಂದ ಜನನವಾಗಿದ್ದು, ಅವುಗಳನ್ನು ಸಮುದ್ರಕ್ಕೆ ಬಿಡಲಾಯಿತು.
ಕಳೆದ ವರ್ಷದ ನವ್ಹೆಂಬರ್ ಎರಡನೇ ವಾರಾಂತ್ಯಕ್ಕೆ ಆಮೆಗಳು ದೇವಭಾಗದ ದಂಡೆಯ ತವರು ಮನೆಗೆ ಬಂದು ಮೊಟ್ಟೆ ‌ಇಟ್ಟು ಮರಳಿ ಸಮುದ್ರ ಸೇರಿದ್ದವು. ಆಮೆಗಳು ದಂಡೆಗೆ ಬಂದು ಉಸುಕು ಬಗೆದು ಕೊಂಚ ಆಳದ ಗುಂಡಿ ಮಾಡಿಕೊಂಡು
ಮೊಟ್ಟೆ ಇಡುವುದು ವಾಡಿಕೆ‌.

ಮೊಟ್ಟೆ ಇಟ್ಟ 53 ನೇ ದಿನಕ್ಕೆ ಮರಿಗಳು ಮೊಟ್ಟೆ ಯಿಂದ ಹೊರ‌ಬರುತ್ತವೆ. ಈ ಪ್ರಕ್ರಿಯೆಯ ಮೇಲೆ ಕರಾವಳಿ ದಂಡೆ ಅರಣ್ಯ ವಲಯದ ಸಿಬ್ಬಂದಿ ಕಾವಲು ಸತತವಾಗಿ ನವ್ಹೆಂಬರ್ ನಿಂದ ಮಾರ್ಚತನಕ ಮುಂದು ವರಿದಿರುತ್ತದೆ. ದೇವಭಾಗ ಕಡಲ ತೀರದಲ್ಲಿ 2024 ನೇ ಸಾಲಿನಲ್ಲಿ ಒಟ್ಟು 26 ಕಡೆ ಕಡಲಾಮೆ ಗೂಡು ಗಳನ್ನು ಪತ್ತೆ ಮಾಡಲಾಗಿದ್ದು, ಸಂರಕ್ಷಿಸಲಾಗಿದೆ. ಮಂಗಳವಾರ 47 ಆಲಿವ್ ರಿಡ್ಲೆ ಜಾತಿಯ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದ್ದು,‌ ಸಂಜೆ ಹೊತ್ತಿಗೆ ಇನ್ನು 48 ಮರಿಗಳು ಮೊಟ್ಟೆಯಿಂದ ಹೊರಬರಲಿವೆ ಎಂದು ಅರಣ್ಯಾಧಿಕಾರಿ ಪ್ರಮೋದ್ ತಿಳಿಸಿದರು.

ದೇವಭಾಗ ಕಡಲತೀರದಲ್ಲಿ ಕಡಲಾಮೆ ಮರಗಳನ್ನು ಮಂಗಳವಾರ ಬೆಳಿಗ್ಗೆ ಕಡಲಿಗೆ ಬಿಡುವಾಗ ಕಾರವಾರ ವಿಭಾಗ ದ ಡಿಸಿಎಫ್ ರವಿಶಂಕರ್ ಸಿ, ಎಸಿಎಫದ ಜಯೇಶ್ ಕೆ.ಸಿ. ,ಆರ್ ಎಫ್ ಓ ಗಜಾನನ ನಾಯ್ಕ, ಭವ್ಯಾ ನಾಯ್ಕ,

ಮೀನುಗಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್, ಜಂಗಲ್ ಲಾಡ್ಜ್ ರೆಸಾರ್ಟನ ಪಿ.ಆರ್ ನಾಯ್ಕ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯ ಮೀನುಗಾರ ಮುಖಂಡರು, ಕಡಲ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಕುಮಾರ್ ಹರಗಿ, ವಿದ್ಯಾರ್ಥಿಗಳು , ಕಡಲಾಮೆ ಪ್ರಿಯರು ಉಪಸ್ಥಿತರಿದ್ದರು.

IMG 20240206 WA0043 Uttara Kannada, State News

IMG 20240206 WA0044 Uttara Kannada, State News

IMG 20240206 WA0042 Uttara Kannada, State News

Latest Indian news

Popular Stories