ಕಾರವಾರ: ಜಿ. ಪಂ. ಡಮಾಮಿ-ಸಮುದಾಯ ಪ್ರವಾಸೋದ್ಯಮ ಅಭಿವೃದ್ಧಿ ಕೇಂದ್ರಕ್ಕೆ ಆಯುಕ್ತೆ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಭೇಟಿ

ಕಾರವಾರ: ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಯಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಲಾದ ಡಮಾಮಿ- ಸಿದ್ದಿ ಸಮುದಾಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡರು.

ಯಲ್ಲಾಪುರ ತಾಲ್ಲೂಕಿಗೆ ಮಂಗಳವಾರ ಭೇಟಿ ನೀಡಿ, ಇಡಗುಂದಿ ಹಾಗೂ ಮದ್ನೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ಅಭಿವೃದ್ಧಿಪಡಿಸಲಾದ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.

ಕೈಗೊಂಡ ಡಮಾಮಿ-ಸಿದ್ದಿ ಪ್ರವಾಸೋದ್ಯಮ ಕಾಮಗಾರಿ ವೀಕ್ಷಿಸಿ , ಸ್ಥಳದಲ್ಲಿದ್ದ ಜಿ. ಪಂ.ನ ಸಿಇಒ ಈಶ್ವರ ಕಾಂದೂ ರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಪಂಚಾಯತ್‌ ನಿಂದ ವಿನೂತನವಾಗಿ ಕೈಗೊಂಡಿರುವ ಡಮಾಮಿ-ಸಿದ್ದಿ ಸಮುದಾಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಮುಂಬರುವ ದಿನಗಳಲ್ಲಿ ಸಿದ್ದಿ ಸಮುದಾಯವನ್ನ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಡಮಾಮಿ ಪ್ರವಾಸೋದ್ಯಮ ಘಟಕ ಮಹತ್ವದ ಪಾತ್ರ ವಹಿಸಲಿದೆ. ಇದರಿಂದಾಗಿ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವ ವಾತಾವರಣವಿದೆ ಎಂದರು.

ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ಮಹಿಳಾ ಸದಸ್ಯರು ಇಲ್ಲಿಗೆ ಆಗಮಿಸುವ, ಪ್ರವಾಸಿಗರನ್ನ ಉಪಚರಿಸುವ ರೀತಿ, ವ್ಯವಹಾರ ಜ್ಞಾನ, ಮಾತನಾಡುವ ಕೌಶಲ್ಯಗಳನ್ನು ವೃದ್ಧಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ತಮ್ಮತ್ತ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.

ನಂತರದಲ್ಲಿ ಸ್ಥಳೀಯ ಸಿದ್ದಿ ಸಮುದಾಯದ ಮಹಿಳೆಯರೊಂದಿಗೆ ಕಾಲ್ನಡಿಗೆಯ ಮೂಲಕ ಅರಣ್ಯ ಚಾರಣ ಮಾಡಿ ವಿವಿಧ ರೀತಿಯ ಔಷಧೀಯ ಸಸ್ಯ, ಜೇನು ಗೂಡು, ಪಕ್ಷಿಗಳು, ಕಿರು ಅರಣ್ಯ ಉತ್ಪನ್ನಗಳು, ಗಡ್ಡೆ ಗೆಣಸು ಹಾಗೂ ಅರಣ್ಯ ವೃಕ್ಷಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಸಿದ್ದಿ ಸಮುದಾಯದ ಮಹಿಳೆಯರು ಮಧ್ಯಾಹ್ನದ ಊಟಕ್ಕೆ ಸಿದ್ದಪಡಿಸಿದ ಖಾದ್ಯಗಳನ್ನು ಸೇವಿಸಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿ. ಪಂ.ನ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಹಾಗೂ ಗ್ರಾಮಸ್ಥರು, ಸಿದ್ದಿ ಸಮುದಾಯದ ಜನರು ಉಪಸ್ಥಿತರಿದ್ದರು.
…..

Latest Indian news

Popular Stories