ಕಾರವಾರ | ಗಾಂಜಾ ಸಾಗಾಟ ಪ್ರಕರಣ : ಅಪರಾಧಿಗೆ 6 ವರ್ಷ ಕಠಿಣ ಸಜೆ: 50 ಸಾವಿರ ದಂಡ : ಜಿಲ್ಲಾ ನ್ಯಾಯಾಧೀಶ ರಿಂದ ಶಿಕ್ಷೆ ಪ್ರಕಟ

ಕಾರವಾರ: ಆಟೋದಲ್ಲಿ 10 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಮುಕ್ತಮ್ ಸಾಬ್ ರುಸ್ತುಮ್ ಸಾವ್ ಗಡದ ಎಂಬಾತನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗೆ 6 ವರ್ಷ ಕಠಿಣ ಸಜೆ ಹಾಗೂ 50 ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಮಾಣ ಪ್ರಕಟಿಸಿದರು.

ಅಪರಾಧಿ ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ ಮತ್ತು ಒಂದು ವರ್ಷ ಹೆಚ್ಚುವರಿ ಕಠಿಣ ಶಿಕ್ಷೆ ಅನುಭವಿಸಬೇಕೆಂದು ಕಾರವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಅಪರಾಧಿ ಮುಕ್ತಮ್ ಸಾವ್ ಗಡದ ಹಿಂದೆ ಸಹ ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಸಜೆ ಅನುಭವಿಸಿದ್ದ. 2018 ಜೂನ್ 20 ರಂದು ಶಿರಸಿಯ ಬೊಮ್ಮನಹಳ್ಳಿ ಕ್ರಾಸ್ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುವಾಗ ಶಿರಸಿ ಗ್ರಾಮೀಣ ಪೊಲೀಸರಗೆ ಸಿಕ್ಕಿ ಬಿದ್ದಿದ್ದ . ಈತನನ್ನು ಬಂಧಿಸಿ ಕಾರಾಗೃಹದಲ್ಲಿ ಇಡಲಾಗಿತ್ತು. ಈ ಪ್ರಕರಣ ಕಳೆದ ಐದು ವರ್ಷದಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡದಿತ್ತು. ಫೆ.17 ರಂದು ಶಿಕ್ಷೆ ಪ್ರಕಟವಾಗಿದ್ದು ತೀರ್ಪುನ ವಿವರಗಳನ್ನು ಜಿಲ್ಲಾ ನ್ಯಾಯಾಲಯ ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಅಪರಾಧಿ ಮುಕ್ತಮಸಾಬ್ ಗಡದ ದಾಂಡೇಲಿ ನಿವಾಸಿಯಾಗಿದ್ದಾನೆ. ಈತನಿಂದ ವಿವ್ಯೂ ಮೊಬೈಲ್ ಸಹ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಪ್ರಧಾನ ಸರ್ಕಾರಿ ವಕೀಲೆ ತನುಜಾ ಹೊಸಪಟ್ಟಣ ಸರ್ಕಾರದ ಪರ ವಾದ ಮಂಡಿಸಿದ್ದರು.
…..

Latest Indian news

Popular Stories