ಉ.ಕ: ಯುವತಿಯರ ಅಶ್ಲೀಲ ಪೋಟೋ ಎಡಿಟ್ ಮಾಡುವ ಗುಂಪು : ಆರೋಪಿ ಬಾಲಚಂದ್ರ ಗೌಡ ಬಂಧನ

ಕಾರವಾರ: ಯುವತಿಯರ ಪೋಟೋಗಳಿಗೆ ಅಶ್ಲೀಲ ದೇಹದ ಪೋಟೋ ಎಡಿಟ್‌ ಮಾಡುತ್ತಿದ್ದ ಮೂವರು ಆರೋಪಿಗಳಲ್ಲಿ ಓರ್ವನನ್ನು ಶಿರಸಿ ಪೊಲೀಸರು ನಿನ್ನೆ ಬಂಧಿಸಿದ ಘಟನೆ ನಡೆದಿದೆ. ಮತ್ತೊರ್ವ ಇಲಿ ಪಾಷಾಣ ಸೇವಿಸಿ ಆಸ್ಪತ್ರೆಗೆ ಸೇರಿದರೆ,‌ಮತ್ತೊಬ್ಬ ಆರೋಪಿ ಯುವತಿ ತಲೆ ಮರೆಸಿಕೊಂಡಿದ್ದಾಳೆ‌ .

ಬಾಲಚಂದ್ರ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದರೆ, ಮತ್ತೊರ್ವ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ. ಪರಾರಿ ಅಸಾಧ್ಯ ಎಂದು ತಿಳಿಯುತ್ತಿದ್ದಂತೆ ಅರುಣಾ‌ ಅಲಿಯಾಸ ಅರ್ಜುನ ಗೌಡ ಇಲಿ ಪಾಷಾಣ ಸೇವಿಸಿದ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊರ್ವ ಆರೋಪಿ ನಾಗವೇಣಿ ಗೌಡ ತಪ್ಪಿಸಿಕೊಂಡಿದ್ದಾಳೆ‌ ‌ಪೊಲೀಸರು ಈಕೆಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಮೂವರ ಮೇಲೆ ಬನವಾಸಿ, ಶಿರಸಿ,ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಜುನ್ ಗೌಡನ‌ ಮನೆಯಲ್ಲಿ ಮೂವರು ಆರೋಪಿಗಳು ಇರುವುದು ತಿಳಿದು ಇವರನ್ನು ಬಂಧಿಸಲು ಪೊಲೀಸರು ಮುಂದಾದಾಗ ಇವರು ಪೊಲೀಸರ ಮೇಲೆ ಕಲ್ಲು ತೂರಿ, ಪರಾರಿಗೆ ಯತ್ನಿಸಿದ್ದರು‌ .
….

Latest Indian news

Popular Stories