ಕಾರವಾರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನವಾಗಿರುವುದು ನಿಜ; ಕೇಂದ್ರದ ಸರ್ಕಾರದ ಗಮನ ಸೆಳೆಯುತ್ತೇವೆ: ಪ್ರತಾಪ್ ಸಿಂಹ ನಾಯಕ್

ಕಾರವಾರ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನವಾಗಿರುವುದು ನಿಜ; ಕೇಂದ್ರದ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಎಂದರು.

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಹಾಲಿ ಸಂಸದರು ಜನರ ಸಮಸ್ಯೆ ಸ್ಪಂದಿಸಿಲ್ಲ. ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರಿಲ್ಲ ಎಂಬ ಪ್ರಶ್ನೆಗೆ ಪ್ರತಾಪ್ ಸಿಂಹ ನಾಯಕ್ ನಿರುತ್ತರರಾದರು.
ನಂತರ ಅವರು ಕೆಲ ಅಭಿಪ್ರಾಯಗಳನ್ನು ಹಂಚಿಕೊಂಡರು‌ .
ಕೇಂದ್ರದ ಮೇಲೆ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ. ರಾಜ್ಯದ ಬಜೆಟ್ ಜನಪರ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆರೋಪಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸಾಧನೆ ಮಾಡಿದೆ ,ಮೂಲಭೂತ ಸೌಕರ್ಯ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿ ಗೆ ಸೌಲಭ್ಯ ನೀಡಿದೆ. ಭಾರತದ ವಿಶ್ವದಲ್ಲಿ ಆರ್ಥಿಕ ಶಕ್ತಿ ಹೆಚ್ಚಿದೆ. ವಿಶ್ವದ ಆರ್ಥಿಕ ಶಕ್ತಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ಯುವಕರು ಮತ್ತು ಸ್ತ್ರೀಶಕ್ತಿ ಸಂಘಗಳ ಜೊತೆ ಮಾತುಕತೆ ಮಾಡಿ ಕೇಂದ್ರ ಸರ್ಕಾರದ ಸಾಧನೆ ತಿಳಿಸುತ್ತೇವೆ ಎಂದರು.

ನರೇಂದ್ರ ಮೋದಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ. ಹಾಗಾಗಿ ನಾವು 400 ಸ್ಥಾನ ಗೆಲ್ಲುತ್ತೇವೆ ಎಂದ
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್
ಕಾಶ್ಮೀರ ದಿಂದ ಕನ್ಯಾಕುಮಾರಿವರೆಗೆ ಜನಮನ ಗೆದ್ದಿದ್ದೇವೆ ಎಂದರು. ಭ್ರಷ್ಟಾಚಾರ, ಪರಿವಾರವಾದ , ಕೆಲ ಸಮುದಾಯಗಳ ತುಷ್ಟಿಕರಣ ಮಾಡುವ ಇಂಡಿಯಾ ಒಕ್ಕೂಟಕ್ಕೆ ಸಂಚಾಲಕರು ಯಾರು, ಪ್ರಧಾನಿಯಾರು ಎಂಬುದು ಹೇಳಲು ಆಗುತ್ತಿಲ್ಲ. ಹಾಗಾಗಿ ಎನ್ ಡಿ ಎ ಗೆಲ್ಲಲಿದೆ ಎಂದರು.
ಅಧಿಕಾರದ ಹಪಾಹಪಿಗೆ ಸಿದ್ದರಾಮಯ್ಯ ನಿರಾಶಾದಯಕ ಬಜೆಟ್ ‌ಮಂಡಿಸಿದರು.

ಅಭಿವೃದ್ಧಿ ದೃಷ್ಟಿಯಿಂದ ಇದು ಶೂನ್ಯ ಬಜೆಟ್ ಎಂದು ಪ್ರತಾಪ್ ಸಿಂಹ ನಾಯಕ್ ಅಭಿಪ್ರಾಯಪಟ್ಟರು.
60 ಸಾವಿರ ಕೋಟಿ ಹಣ ಗ್ಯಾರಂಟಿಗೆ ಇಟ್ಟಿದ್ದಾರೆ. ಹಾಗಂತ ನಾವು ಗ್ಯಾರಂಟಿ ವಿರೋಧಿಗಳಲ್ಲ. ಬಡವರಿಗೆ ಸಹಾಯ ಆಗುವುದಾದರೆ ಗ್ಯಾರಂಟಿಗಳು ಇರಲಿ. ಆದರೆ ಇದು ಭಾಷಣಕ್ಕೆ ಸೀಮಿತ. ಚುನಾವಣೆ ಪ್ರಣಾಳಿಕೆ ಮಾತ್ರ ಇದು. ಗ್ಯಾರಂಟಿ ಯೋಜನೆ ಅನುಷ್ಠಾನ ಯೋಗ್ಯ ರೀತಿಯಲ್ಲಿ ಇಲ್ಲ ಎಂದರು‌ .
ನಮ್ಮ ಪ್ರದೇಶಾಭಿವೃದ್ಧಿಗೆ ಎರಡು ಕೋಟಿ ಕೊಡಬೇಕು. 224 ಶಾಸಕರು ಹಾಗೂ 76 ವಿಧಾನಪರಿಷತ್ ಸದಸ್ಯರಿಗೆ ಪೂರ್ಣ ಪ್ರಮಾಣದಲ್ಲಿ ಕೊಟ್ಟಿಲ್ಲ. ಸ್ವಲ್ಪ ಪ್ರಮಾಣದ ಅನುದಾನ ಕೊಟ್ಟಿದ್ದಾರೆ‌ .ಎಸ್ ಎಸ್ಟಿ ಗಳ 11000 ಕೋಟಿ ಹಣ ಗ್ಯಾರಂಟಿಗೆ ಹೋಗಿದೆ.

ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಹಣ ನೀಡಿಲ್ಲ ಎಂದರು. ಇಂಧನ ಇಲಾಖೆ 23195 ಕೋಟಿ ಮೀಸಲಿಡಲಾಗಿದೆ‌ . 9000 ಕೋಟಿ ಗೃಹಜ್ಯೋತಿಗೆ ಹೋಗುತ್ತದೆ‌ .700 ಕೋಟಿ ಮಾತ್ರ ಅಭಿವೃದ್ಧಿಗೆ ಉಳಿದಿದೆ ಎಂದು ಪ್ರತಾಪ್ ಸಿಂಹ ನಾಯಕ್ ಆರೋಪಿಸಿದರು.
ಕಾರ್ಮಿಕ ಇಲಾಖೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್ ನಿಲ್ಲಿಸಿದ್ದಾರೆ. ಒಂದು ಕಿ.ಮೀ. ರಸ್ತೆ ರಾಜ್ಯ ಸರ್ಕಾರದಿಂದ ಮಾಡಿಲ್ಲ ಎಂದರು. ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ್ , ಗೋವಿಂದ ನಾಯಕ್ , ಕಿಶನ್ ಉಪಸ್ಥಿತರಿದ್ದರು.
….

Latest Indian news

Popular Stories