ಕುಣಬಿಗಳು ತುಳಸಿ ಪೂಜೆ ಮಾಡಿದ ಮಾತ್ರಕ್ಕೆ ವೈಷ್ಣವರಲ್ಲ : ಮಹೇಂದ್ರ ಕುಮಾರ್

ಕಾರವಾರ: ತುಳಸಿ ಪೂಜೆ ಮಾಡಿದ್ದಕ್ಕೆ, ಹಿಂದುತ್ವದ ಎಲೆಮೆಂಟ್ ಎದ್ದು ಕಂಡ ಮಾತ್ರಕ್ಕೆ ಬುಡಕಟ್ಟು ಜನಾಂಗ ಕುಣಬಿಗಳನ್ನು ಪರಿಶಿಷ್ಟ ವರ್ಗದ ಸೌಲಭ್ಯದಿಂದ ವಂಚಿಸಲಾಗದು ಎಂದು ಗ್ರೀನ್ ಇಂಡಿಯಾದ ಸಂಚಾಲಕ ಮಹೇಂದ್ರ ಕುಮಾರ್ ಹೇಳಿದರು‌ .

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು‌ . ಕವಿವಿ ಅಂಥ್ರಪಾಲಜಿ ವಿಭಾಗದ ಬಸವನಗೌಡರು ನಗರೀಕರಣದ ಕುಣಬಿಗಳನ್ನು ಅಧ್ಯಯನ ಮಾಡಿ ತಪ್ಪು ವರದಿ ನೀಡಿದರು. 2015 ರಲ್ಲಿ ಮೈಸೂರು ವಿವಿ ಅಂಥ್ರಪಾಲಜಿ ವಿಭಾಗದ ಗಂಗಾಧರ ಅಧ್ಯಯನ ಸರಿಯಾಗಿ ಮಾಡಿದರು. ಪೋರ್ಚುಗೀಸ್ ಕಾಲದ ಕುಣಬಿಗಳು ಗೋವಾದಿಂದ ಜೋಯಿಡಾಕ್ಕೆ ಸ್ಥಳಾಂತರ ಗೊಂಡರು. ಗೋವಾದಲ್ಲಿ ಕುಣಬಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಕರ್ನಾಟಕದ ಕುಣಬಿಗಳನ್ನು ಪರಿಶಿಷ್ಟರಾಗಿ ಕೇಂದ್ರ ಸರ್ಕಾರ ಸೇರಿಸಿಲ್ಲ.

ಜೊಯಿಡಾ ಟೈಗರ್ ರಿಜರ್ವ‌ ಫಾರೆಸ್ಟ ಅಡಿ ಬರುತ್ತಿದ್ದು, ಜನವಸತಿ ಜೊತೆಗೆ ಇರುವ ಏಕೈಕ ಕಾಯ್ದಿಟ್ಟ ಹುಲಿ ಸಂರಕತಷಿತ ಪ್ರದೇಶ ಎಂದು 2008 ರಲ್ಲಿ ನೋಟಿಫಿಕೇಶ‌ನ್ ಆಗಿದೆ. ಹಾಗಾಗಿ ಅರಣ್ಯ ರಕ್ಷಕರಾಗಿರುವ ಕುಣಬಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ ಕಳೆದ 20 ವರ್ಷದಿಂದ ಎಲ್ಲಾ ಸರ್ಕಾರಗಳು ಕುಣಬಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಪ್ರಯತ್ನ ಮಾಡುವೆ. ಈಗ ಕುಣಬಿಗಳನ್ನು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಗೋವಾ ಸ್ಪೀಕರ್ ರಮೇಶ್ ತವಡ್ಕರ್ ಸಹ ಈ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ಸಹ ಕೇಂದ್ರ ಸರ್ಕಾರದ ಮನ ಒಲಿಸುವೆ ಎಂದರು. ನಾನು ಕುಣಬಿಗಳ ಹೋರಾಟದ ಜೊತೆ ಇರುವೆ ಎಂದರು.

ಕುಣಬಿ ಸಮಾಜದ ಮುಖಂಡ, ಜಿಲ್ಲಾಧ್ಯಕ್ಷ ಸುಭಾಷ್ ಗಾವುಡ ಮಾತನಾಡಿ ನಮ್ಮ ಹೋರಾಟ ಮುಂದುವರಿಯಲಿದೆ. ನಾವು ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದರು . ಅಜಿತ್ ಮಿರಾಶಿ ಮಾತನಾಡಿ ಹೋರಾಟದ ಇತಿಹಾಸ, ಹೋರಾಡಕ್ಕೆ ಸಹಾಯ ಮಾಡಿದ ಆರ್.ವಿ. ದೇಶಪಾಂಡೆ ಹಾಗೂ ವಿವಿಧ ಸಮುದಾಯ ಸಂಘಟನೆಗಳು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಬೆಂಬಲ ನೀಡಿವೆ ಎಂದರು‌ .

ಹೊಳಿ ಹಬ್ಬದಲ್ಲಿ ಉಪವಾಸ ಮಾಡಲ್ಲ:

ಹೊಳಿ ಹಬ್ಬದಲ್ಲಿ ಉಪವಾಸ ಮಾಡುವಂತಿಲ್ಲ. ಮೇಲಾಗಿ ಕುಣಬಿಗಳಲ್ಲಿ ಸಾವನ್ನಪ್ಪಿದ ಹಿರಿಯರೇ ದೈವಗಳು. ಹಾಗಾಗಿ ಸತ್ಯಾಗ್ರಹವನ್ನು ಹೊಳಿ ಹಬ್ಬ ಮತ್ತು ಎಲೆಕ್ಷನ್ ಕಾರಣ ನಿಲ್ಲಿಸಲಾಗುವುದು‌ .ಹೋರಾಟವನ್ನು ರಾಜಕೀಕರಣಗೊಳಿಸಲ್ಲ, ಲೋಕಸಭಾ ಎಲೆಕ್ಷನ್ ನಂತರ ಮತ್ತೆ ಹೋರಾಟ ಮುಂದುವರಿಸಲಾಗುವುದು ಎಂದು ಕುಣಬಿ ಮುಖಂಡರು ಹೇಳಿದರು‌ .ಪತ್ರಿಕಾಗೋಷ್ಠಿಯಲ್ಲಿ ಮಬಳು ಕುಂಡಲ್ಕರ್, ಪ್ರೇಮಾನಂದ ವೇಳಿಪ್, ಮಹಾಬಲೇಶ್ವರ ಕುಣಬಿ, ಪ್ರಭಾಕರ್ ವೇಳಪ್, ಸಮೀರ್ ವೇಳಿಪ್ ಉಪಸ್ಥಿತರಿದ್ದರು.
…..

…..

Latest Indian news

Popular Stories