ಸಾರ್ವಜನಿಕರಿಗೆ, ಯುವಕರಿಗೆ ಕಾನೂನು ಅರಿವು ಅಗತ್ಯ : ನ್ಯಾ. ಡಿ.ಎಸ್. ವಿಜಯಕುಮಾರ್

ಕಾರವಾರ: ಸಾರ್ವಜನಿಕರಿಗೆ, ಯುವಕರಿಗೆ ಕಾನೂನು ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾ. ಡಿ.ಎಸ್. ವಿಜಯಕುಮಾರ್ ಅಭಿಪ್ರಾಯಪಟ್ಟರು‌ .

ಸೋಮನಾಥ ಪ್ರೌಡಶಾಲೆ ಆವರಣ ಬಿಣಗಾದಲ್ಲಿ ರವಿವಾರ ಜಿಲ್ಲಾ ಕಾರ್ಮಿಕ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.ಕಾನೂನು ಅರಿವು ಇದ್ದ ಸಮಾಜದಲ್ಲಿ ವ್ಯಾಜ್ಯಗಳ ಪ್ರಮಾಣ ಇಳಿಕೆಯಾಗಬಹುದು ಎಂದರು‌ . ಕಾನೂನು ಸೇವಾ ಪ್ರಾಧಿಕಾರ ಕಾಲೇಜುಗಳಲ್ಲಿ ಕಾನೂನು ಅರಿವು ಮೂಡಿಸುವುದರ ಹಿಂದೆ ಸದುದ್ದೇಶ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಸಿಜೆಎಂ ನ್ಯಾಯಾಲಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಜೆ. ರೊಡ್ರಿಗಸ್ , ಕೌಟಂಬಿಕ ದೌರ್ಜನ್ಯ ತಡೆ ಕಾಯ್ದೆ 2005 ಮತ್ತು ಲ್ಯೆಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯಿದೆಯ ಕುರಿತು ಉಪನ್ಯಾಸ ನೀಡಿ ಸುಶಿಕ್ಷಿತ ಸಮಾಜ ರೂಪಗೊಳ್ಳ ಬೇಕಾದರೆ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ತಿಳಿದುಕೊಳ್ಳಬೇಕು.

ಪುರುಷರು , ಮಹಿಳೆಯರ ಕುರಿತು ಸಂವೇದನಾ ಶೀಲತೆ ಬೆಳಸಿಕೊಳ್ಳಬೇಕು ಎಂದರು. ಯುವಕರು ಕುಟುಂಬ ಪ್ರೀತಿಯ ಜೊತೆ ಸಹವರ್ತಿಗಳ ಜೊತೆ ಉತ್ತಮವಾಗಿ ನಡೆದುಕೊಳ್ಳಬೇಕು ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ್ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.ಕಾರವಾರ ಸಿಜೆಎಂ ನ್ಯಾಯಾಲಯದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ
ಮಹಾಂತೇಶ ದರಗದ ,ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಎನ್. ಜಾಂಬವಲಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ತಡೆ ಕಾಯ್ದೆ ಹಾಗೂ ಕಾರ್ಮಿಕ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು .

ರವಿಕುಮಾರ್, ಡಾ.ನೀರಜ್ ಬಿ. ವಿ .ಜಿಲ್ಲಾ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಇಲಾಖೆಯ ಸಿಬ್ಬಂದಿಗಳು ಊರ ನಾಗರಿಕರು, ಶಿಕ್ಷಕರು, ಉಪಸ್ಥಿತರಿದ್ದರು.
…..

Latest Indian news

Popular Stories