ಪ್ರೀತಿ ವಿವಾದ : ಯುವಕನಿಂದ ಎದುರಾಳಿ ಯುವಕನಿಗೆ ಚಾಕು ಇರಿತ

ಕಾರವಾರ : ಯುವತಿ ಪ್ರೀತಿ ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದ ಕಂಡು ಕುಪಿತನಾದ ಮಾಜಿ ಪ್ರಿಯಕರ , ಎದುರಾಳಿ ಯುವಕನಿಗೆ ಕುತ್ತಿಗೆಯ ಭಾಗಕ್ಕೆ ಚಾಕು ಇರಿದು ಗಾಯಗೊಳಿಸಿದ ಘಟನೆ ಕುಮಟಾ ಪಟ್ಟಣ ಮಣಕಿ ಗ್ರೌಂಡನಲ್ಲಿ ಇಂದು ನಡೆದಿದೆ.

ರಾಜೇಶ ಎಂಬಾತ , ಸಂತೋಷ ಅಂಬಿಗ ಎಂಬ ಯುವಕನಿಗೆ ಚಾಕು ಇರಿದಿದ್ದಾನೆ.

ರಾಜೇಶ ಅಂಬಿಗ ಮೊದಲು ಯುವತಿಯೋರ್ವಳನ್ನ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಇಬ್ಬರೂ ಚೆನ್ನಾಗಿಯೇ ಇದ್ದರೂ ಎನ್ನಲಾಗಿದೆ. ಕಳೆದ ‌ಒಂದು ವರ್ಷದಿಂದ ರಾಜೇಶನ ನಡವಳಿಕೆ ಸರಿಯಿಲ್ಲ ಎನಿಸಿದ ಕಾರಣ , ಆಕೆ ರಾಜೇಶ ಪ್ರೀತಿಯನ್ನ ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ.

ಈಚೆಗೆ ಸಂತೋಷ ಅಂಬಿಗ ಎಂಬಾತ , ರಾಜೇಶ ಪ್ರೀತಿ ಮಾಡುತ್ತಿದ್ದ ಯುವತಿಯನ್ನ ಪ್ರೀತಿ ಮಾಡಲು ಪ್ರಾರಂಭಿಸಿ ವಿವಾಹ ಕೂಡ ನಿಶ್ಚಿತವಾಗಿತ್ತು ಎನ್ನಲಾಗಿದೆ.

ಈ ವಿಚಾರ ಅರಿತ ರಾಜೇಶ, ಇಂದು ಸಂತೋಷ ಅಂಬಿನಿಗೆ ಪೋನ್ ಕರೆ ಮಾಡಿ , ನಿನ್ನ ಬಳಿ ಮಾತನಾಡುವುದಿದೆ. ಒಬ್ಬನೆ ಮಣಕಿ ಗ್ರೌಂಡ್‌ಗೆ ಬಾ ಎಂದು ಕರೆದಿದ್ದಾನೆ‌. ಆದರೆ ಸಂತೋಷ ಬರುವಾಗ ತನ್ನ ಜೊತೆ ಒಂದಿಬ್ಬರೂ ಸ್ನೇಹಿತರನ್ನ ಕರೆದುಕೊಂಡು ಬಂದಿದ್ದ . ಈ ವೇಳೆ ರಾಜೇಶ್ ಹಠಾತ್ತಾಗಿ , ಸಂತೋಷ ಕಣ್ಣಿಗೆ ಕಾರ ಪುಡಿ ಎಸೆದು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ‌‌ ಎನ್ನಲಾಗಿದೆ. ಸಂತೋಷ ಅಂಬಿಗ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ ಅಂಬಿಗನಿಗೆ ಚಿಕಿತ್ಸೆ ಮುಂದುವರಿದಿದೆ.
…..

Latest Indian news

Popular Stories