ಕೆಳ ನ್ಯಾಯಾಲಯದ ತೀರ್ಪು : ಭಾಗಶಃ ಬದಲಾವಣೆ ಜೊತೆಗೆ ತೀರ್ಪು ಪುರಸ್ಕರಿಸಿದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ: ಅರಣ್ಯ ಇಲಾಖೆಯ ಸಿಬ್ಬಂದಿಯ ಮೆಲೆ ಹಲ್ಲೆ‌ಜೀವ ಬೆದರಿಕೆ ಹಾಕಿದ್ದಕ್ಕೆ ೧ ವರ್ಷ ಸದಾ ಕಾರಾಗೃಹ ಶಿಕ್ಷೆ

ಕಾರವಾರ: ಮುಂಡಗೋಡ ಚೌಡಳ್ಳಿಯಲ್ಲಿ ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ನುಗ್ಗಿ ಸಿಬ್ಬಂದಿಗೆ ಹಲ್ಲೆ‌ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮೊದಲ ಮತ್ತು ಎರಡನೇ ಅಪರಾಧಿಗಳಿಗೆ ಕೆಳ ನ್ಯಾಯಾಲಯ ನೀಡಿದ ತೀರ್ಪುನ್ನು ಭಾಗಶಃ ಬದಲಾವಣೆ ಜೊತೆಗೆ ಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.

ಅಪರಾಧಿ ಗೋವಿಂದ ರಾಠೋಡ್ ಮಾಡಿದ ತೀರ್ಪು ಪುನರ್ ಪರಿಶೀಲನಾ ಅರ್ಜಿಯನ್ನು ಹೆಚ್ಚವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ತಿರಸ್ಕರಿಸಿದ್ದಾರೆ.

ಮುಂಡಗೋಡ ಜೆಎಂ‌ಎಫ್ ಸಿ ನೀಡಿದ ತೀರ್ಪುನ ದಂಡದ ಮೊತ್ತವನ್ನು ರೂ. 4500 ರಿಂದ 2500 ರೂ.ಗೆ ಇಳಿಸಿದ್ದಾರೆ.‌ಮೂರನೇ ಆರೋಪಿ ಘಟನೆ ನಡೆದಾಗ ಅಪ್ರಾಪ್ತ ನಿದ್ದ ಕಾರಣಕ್ಕೆ ಬಾಲ ನ್ಯಾಯಾಲಯಕ್ಕೆ ಮುಂದಿನ ವಿಚಾರಣೆ ಗೆ ಶಿಫಾರಸ್ಸು ಮಾಡಲಾಗಿದೆ.

2016 ರಲ್ಲಿ ಮುಂಡಗೋಡ ಠಾಣೆಯಲ್ಲಿ 241/2016 ದಾಖಲಾಗಿತ್ತು. ಆರೋಪಿ ಗೋವಿಂದ ಹಾಗೂ ಆತನ ಪತ್ನಿ ಶಾರದಾ ಸೇರಿ
ಅರಣ್ಯ ಸಿಬ್ಬಂದಿ ‌ಅರುಣ್ ಕುಮಾರ್ ಸೀತಾರಾಂ ಕಾಶಿ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದರು‌ . ಕರ್ತವ್ಯಕ್ಕೆ ಅಡ್ಡಪಡಿಸಿ, ಹಲ್ಲೆ‌ಮಾಡಿ ಗಾಯಗೊಳಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದರು. ಇವರಿಗೆ ಮುಂಡಗೋಡ ಜೆಎಂಎಫ್ ಸಿಯಲ್ಲಿ 1 ವರ್ಷ ಸದಾ ಸಜೆ, ದಂಡ 4500 ರೂ‌ ಹಾಗೂ ದೂರುದಾರರಿಗೆ ತಲಾ ಹತ್ತು ಸಾವಿರ ಪರಿಹಾರ ನೀಡುವಂತೆ ತೀರ್ಪು ನೀಡಿ ಆದೇಶಿಸಿತ್ತು.

ಇದರ ವಿರುದ್ಧ ಅಪಾದಿತರು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕೆಳ ನ್ಯಾಯಾಲಯ ದ ತೀರ್ಪುನ್ನು ಭಾಗಶಃ ಎತ್ತಿ ಹಿಡಿದಿದೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ವಾದಿಸಿದ್ದರು.

Latest Indian news

Popular Stories