ಉ.ಕ: ಸೆಕ್ಸ್ ವರ್ಕರ್ಸ್’ಗಾಗಿ ಕೆಲಸ ಮಾಡುವ ಮಹಿಳಾ ಕ್ರಾಂತಿ ಎನ್ .ಜಿ .ಒ.ದಲ್ಲಿ ಅವ್ಯವಹಾರ | ಅರ್ಚನಾ ನಾಯಕ್ ಆರೋಪ

ಕಾರವಾರ : ಏಡ್ಸ್ ನಿಯಂತ್ರಣ ಮತ್ತು ಸೆಕ್ಸ ವರ್ಕರ್ಸ್ ಗಾಗಿ ಕೆಲಸ ಮಾಡುವ ಮಹಿಳಾ ಕ್ರಾಂತಿ ಎನ್ .ಜಿ .ಒ.ದಲ್ಲಿ ಅವ್ಯವಹಾರವಾಗಿದೆ ಎಂದು ಶಿರಸಿಯ ವರ್ಲ್ಡ್ ಹ್ಯುಮನ್ ರೈಟ್ಸ ಆರ್ಕೆ ಫೌಂಡೇಶನ್ ಮಹಿಳಾ ಅಧ್ಯಕ್ಷೆ ಅರ್ಚನಾ ಜೆ.ನಾಯಕ್ ಆರೋಪ ಮಾಡಿದರು‌ .

ಮಹಿಳಾ ಕಾಂತ್ರಿ ಎನ್. ಜಿ .ಒ. ನಡೆಸುವ ಅಧ್ಯಕ್ಷೆ , ಕಾರ್ಯದರ್ಶಿ ಶಿರಸಿ, ಯಲ್ಲಾಪುರ ಹಾಗೂ ಕುಮಟಾ‌ ವಿಳಾಸ ತೋರಿಸಿದ್ದಾರೆ. ಎಲ್ಲೂ ಸ್ಥಿರವಾದ ಕಚೇರಿ ಸಹ ಇಲ್ಲ. ಅವರ ಎನ್ .ಜಿ.ಒ. ದಲ್ಲಿ
ಕೆಲಸ ಮಾಡುವ ಪ್ರೋಗ್ರಾಂ ಮ್ಯಾನೇಜರ್, ಅಪ್ತ ಸಮಾಲೋಚಕರು ಹಾಗೂ ಅವರ ಸಹಾಯಕರಿಗೆ ಸರಿಯಾಗಿ ವೇತನ ಸಹ ನೀಡದೆ ಶೋಷಣೆ ಮಾಡಿದ್ದಾರೆಂದು ಅರ್ಚನಾ ದೂರಿದರು.

ಮಹಿಳಾ ಕ್ರಾಂತಿ ಸಂಘಟನೆಯಲ್ಲಿ ಕೆಲಸ ಮಾಡಿ,‌ಹೊರ ಬಂದಿರುವ ಸೌಮ್ಯ ರಾವ್ ಮಾತನಾಡಿ ಎಚ್. ಐ .ವಿ. ಇರುವವರನ್ನು ಗುರುತಿಸುವಲ್ಲಿ ಬೋಗಸ್ ಕಾರ್ಯಾಚರಣೆಯಾಗಿದೆ. ಸಂಸ್ಕಾರ‌ ಇರುವ ಕುಟುಂಬದ ಮಹಿಳೆಯರನ್ನು ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಕರೆದು ಅವರ ವಿಳಾಸ‌,ಹೆಸರು, ‌ಆಧಾರ್ ಕಾರ್ಡ ಪಡೆದು , ಒಳ್ಳೆಯ ಗೃಹಿಣಿಯರನ್ನು, ಅವರ ಮನೆಯ ಹದಿ ಹರೆಯದ ಹುಡುಗಿಯರನ್ನು ಸೆಕ್ಸ ವರ್ಕಸ್ ಗಳ ಪಟ್ಟಿಗೆ ಸೇರಿಸಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು , ಜಿಲ್ಲಾ‌ ಏಡ್ಸ‌ ನಿಯಂತ್ರಣ ಜಾಗ್ರತೆ ಮೂಡಿಸುವ ಜವಾಬ್ದಾರಿ ಹೊತ್ತ ಎನ್‌ಜಿಒ ಮಹಿಳಾ ಕ್ರಾಂತಿಗೆ ಕೊಟ್ಟಿರುತ್ತದೆ. ಆದರೆ ಮಹಿಳಾ ಕ್ರಾಂತಿ ಹೆಸರಲ್ಲಿ ಬೋಗಸ್ ದಾಖಲೆ, ಬೋಗಸ್ ಎಚ್ ವಿ ಐ ಟೆಸ್ಟ ತೋರಿಸಿ, ಯಾರದೋ‌ ಹೆಸರಿಗೆ ಯಾರದೋ ವರದಿ ಸೇರಿಸಿ ದಾಖಲೆ‌ ಸೃಷ್ಟಿಸಿ , ಟಾರ್ಗೆಟ್ ರೀಚ್ ಮಾಡಲಾಗುತ್ತಿತ್ತು ಎಂದು ಒಳ್ಳೆಯ ಮನೆತನದ ಗೃಹಿಣಿಯರ‌ನ್ನು ಸೆಕ್ಸ ವರ್ಕರ್ಸ ಎಂದು ತೋರಿಸಲಾಗಿದೆ ಎಂದು ಸೌಮ್ಯ ಅಪಾದಿಸಿದರು.
ಧರ್ಮಸ್ಥಳ ಸ್ವಸಹಾಯ ಸಂಘದ ಸಭೆಯ ಪೋಟೋ ಬಳಸಿ, ಅವನ್ನೇ ಸೆಕ್ಸ ವರ್ಕರ್ಸ ಮೀಟಿಂಗ್ ಎಂದು ಸರ್ಕಾರಕ್ಕೆ, ‌ರಾಜ್ಯ ಏಡ್ಸ ನಿಯಂತ್ರಣ ಸೊಸೈಟಿ ಗೆ ತಪ್ಪು ಮಾಹಿತಿ ನೀಡಿ, ಅನುದಾನ ಕಬಳಿಸಲಾಗಿದೆ. ಮಹಿಳಾ ಕ್ರಾಂತಿಯಲ್ಲಿ ಕೆಲಸ‌ ಮಾಡಿದ‌ ಕೆಲ ಸಿಬ್ಬಂದಿಗೆ ಸರಿಯಾಗಿ ವೇತನ ಕೊಡದೆ ಸತಾಯಿಸಲಾಗುತ್ತಿದೆ. ಸಿಬ್ಬಂದಿ ಬಿಟ್ಟು ಹೋದಾಗ ಅದೇ ಹೆಸರಿನವರನ್ನು ಹುಡುಕಿ, ಬ್ಯಾಂಕ್ ಖಾತೆ ಮಾಡಿಸಿ ಹಣ ಡ್ರಾ ಮಾಡಿಕೊಳ್ಳಲಾಗುತ್ತಿದೆ. ಈ‌ ಸಂಬಂಧ‌ ದೆಹಲಿ ಏಡ್ಸ ನಿಯಂತ್ರಣ ಜಾಗೃತಿ ಘಟಕ‌ ಮತ್ತು ರಾಜ್ಯ ಏಡ್ಸ ನಿಯಂತ್ರಣ ಸೊಸೈಟಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ವರ್ಲ್ಡ್ ಹ್ಯುಮನ್ ರೈಟ್ಸ್ ಜಿಲ್ಲಾ ಘಟಕದ ಮೊರೆ ಹೋಗಿದ್ದೇವೆ ಎಂದು ಸೌಮ್ಯ ರಾವ್ ಹೇಳಿದರು‌. ಸೆಕ್ಸ ವರ್ಕರ್ಸಗೆ ಕಾಂಡೋಂಗಳನ್ನು ಸಹ ವಿತರಿಸಲಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಮಹಿಳಾ ಕ್ರಾಂತಿ ಫಿಮೇಲ್ ಸೆಕ್ಸ ವರ್ಕರ್ಸ ಅಪ್ತ ಸಮಾಲೋಚಕ
ತುಕಾರಾಂ ಮಾತನಾಡಿ ಅಪ್ತ ಸಮಾಲೋಚಕರಿಗೆ 17000 ವೇತನ ಇದೆ. ಯೋಜನಾ ಮ್ಯಾನೇಜರ್ ಗೆ 22000 ರೂ. , ಎಡ್ಸ ನಿಯಂತ್ರಣ ಸಹಾಯಕರಿಗೆ 7000 ರೂ.ವೇತನ ‌ಇದೆ.‌ ಈ ಹಣವನ್ನು ಸರಿಯಾಗಿ ಕೊಡದೆ ಲಪಟಾಯಿಸಲಾಗುತ್ತಿತ್ತು.‌ ಮಹಿಳಾ ಕ್ರಾಂತಿ ಫಿಮೇಲ್ ಸೆಕ್ಸ ವರ್ಕರ್ಸ ಎನ್ .ಜಿ.ಒ. ಕ್ಕೆ ವಾರ್ಷಿಕ 36 ಕೋಟಿ ರೂ. ಅನುದಾನ ಇದ್ದು, ಆರು ತಿಂಗಳಿಗೆ ಒಮ್ಮೆ ಎರಡು ಕಂತಲ್ಲಿ ತಲಾ 18 ಕೋಟಿ ಬಿಡುಗಡೆಯಾಗುತ್ತಿತ್ತು. ಆದರೆ ಏಡ್ಸ ಜಾಗೃತಿ ಮತ್ತು ಸೆಕ್ಸ ವರ್ಕರ್ಸಗೆ ಸರಿಯಾದ ಮಾಹಿತಿ ಕೊಡಲು ಎನ್ ಜಿ ಒ ಆಸಕ್ತಿ ತೋರುತ್ತಿರಲಿಲ್ಲ. ನಮಗೆ ವೇತನ ಸಹ ಕೊಡಲಿಲ್ಲ. ಆರು ತಿಂಗಳ ಕೆಲಸಕ್ಕೆ ಮೂರು ತಿಂಗಳ ವೇತನ ‌ನೀಡಿ, ಉಳಿದ ‌ಹಣ ದುರುಪಯೋಗ ಆಗುತ್ತಿತ್ತು ಎಂದು ತುಕಾರಾಂ ವಿವರಿಸಿದರು.


ಮಹಿಳಾ ಕ್ರಾಂತಿ ಸಂಘಟನೆಯಿಂದ ಅನ್ಯಾಯವಾಗಿದೆ ಎಂದು ,ಫಾತೀಮಾ ಸಿದ್ದಿ ಹಾಗೂ ಮಹಿಳಾ ಕ್ರಾಂತಿಯ ಕೌನ್ಸಿಲರ್ ರೋಜಿ, ತುಳಜಾ ಬಾನು ಅಪಾದಿಸಿದರು.‌


ಪತ್ರಿಕಾಗೋಷ್ಠಿಯಲ್ಲಿ ಡಬ್ಲ್ಯೂ ಎಚ್ ಆರ್ ಆರ್ಕೆ ಫೌಂಡೇಶನ್ ಪದಾಧಿಕಾರಿಗಳಾದ ವಕೀಲರಾದ ಶಿರಸಿಯ ಜಯಪ್ರಕಾಶ್ , ಎಂ.ನಾಯ್ಕ , ಮೀನಾಕ್ಷಿ , ಮಂಜುನಾಥ ಡಿ.ನಾಯ್ಕ, ತಾಲೂಕ ಅಧ್ಯಕ್ಷ, ಶ್ರೀಧರ ನಾಯ್ಕ, ಶ್ರೀನಿವಾಸ ಮಾಸ್ತಪ್ಪ ನಾಯ್ಕ,ಎನ್. ಎಂ. ನಾಯ್ಕ ಯಲ್ಲಾಪುರ, ಮಾಲಿನಿ ನಾಯ್ಕ, ಥೆರೆಸಾ ಡಿಸೋಜಾ ಉಪಸ್ಥಿತರಿದ್ದರು.

“ಮಹಿಳಾ ಕ್ರಾಂತಿ ಎನ್ ಜಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಚೇರಿ ವಿಳಾಸ ಮೂರು ಕಡೆ ತೋರಿಸಲಾಗಿದೆ. ದಾಖಲೆಗಳು ಪ್ರಾಮಾಣಿಕವಾಗಿಲ್ಲ. ಏಡ್ಸ ನಿಯಂತ್ರಣ ಮತ್ತು ಸೆಕ್ಸ ವರ್ಕರ್ಸ ಗುರುತಿಸುವ ಕಾರ್ಯವೈಖರಿ ಸರಿಯಿಲ್ಲ ಎಂದು ಸರ್ಕಾರಕ್ಕೆ, ರಾಜ್ಯ ಏಡ್ಸ ನಿಯಂತ್ರಣ ಸೊಸೈಟಿಗೆ ಮುರು ಸಲ ವರದಿ ಕಳುಹಿಸಲಾಗಿದೆ. ಈ ವರ್ಷ ಮಾರ್ಚ ನಿಂದ ಮಹಿಳಾ‌ಕ್ರಾಂತಿಗೆ ಅನುದಾನ ಬಿಡುಗಡೆಯಾಗಿಲ್ಲ.”

ಡಾ‌ .ಹರ್ಷಾ ವೆಂಕಟೇಶ.
ನೋಡಲ್ ಅಧಿಕಾರಿ.‌ ಜಿಲ್ಲಾ ಏಡ್ಸ ನಿಯಂತ್ರಣ ಘಟಕ .‌
ಡಿಎಚ್ಒ ಕಚೇರಿ. ಕಾರವಾರ.

Latest Indian news

Popular Stories