ಹೆದ್ದಾರಿ ಅಧಿಕಾರಿಗಳ ವಿರುದ್ಧ ಸಚಿವ ವೈದ್ಯ ಕೆಂಡಾಮಂಡಲ: ನಿಮಗೆ ಮಾನ ಮರ್ಯಾದೆ ಇದೆಯಾ?

ಕಾರವಾರ: ಜಿಲ್ಲೆಯಲ್ಲಿ ಭಟ್ಕಳ ದಿಂದ ಮಾಜಾಳಿ ವರೆಗೆ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹೆದ್ದಾರಿ ಕಾಮಗಾರಿ ಇನ್ನು ಮುಗಿಯದಿರುವ ಬಗ್ಗೆ ರಾಷ್ಟೀಯ ಹೆದ್ದಾರಿ ಅಧಿಕಾರಿಗಳನ್ನ ಸಚಿವ ಮಂಕಾಳು ವೈದ್ಯ ತರಾಟೆಗೆ ತೆಗೆದುಕೊಂಡರು. ‘ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ? ಕೆಂಡಾಮಂಡಲವಾದ ಘಟನೆ ಬುಧುವಾರ ಕಾರವಾರ ಜಿ.ಪಂ.ಸಭಾ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.

ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ವಿಷಯ ಪ್ರಸ್ತಾಪವಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರವಾರದ ಮಾಜಾಳಿಯಿಂದ ಭಟ್ಕಳದ ಶಿರಾಲಿ ತನಕ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನ ಕಳೆದ ಹತ್ತು ವರ್ಷದಿಂದ ಮಾಡುತ್ತಾ ಇದ್ದೀರಿ.

ಆದರೆ ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ.ಅಪೂರ್ಣ ಕಾಮಗಾರಿಯಿಂದ ನಿತ್ಯವೂ ಹೆದ್ದಾರಿಯಲ್ಲಿ ಅಪಘಾತಗಳಾಗಿ , ಜನ ಸಾವನ್ನಪ್ಪುತ್ತಿದ್ದಾರೆ‌. ಹೆದ್ದಾರಿ ಅಗಲೀಕಣರ ಕಾಮಗಾರಿ ಕೈಗೊಂಡ ಐಆರ್ ಬಿ ಕಂಪನಿ ಸರಿಯಾಗಿ ಕೆಲಸ ಮಾಡತ್ತಾ ಇಲ್ಲ.‌ ಬಿಜೆಪಿ ಜನಪ್ರತಿನಿಧಿಗಳು ತಮ್ಮ ಮಂತ್ರಿಯ ಕಂಪನಿ‌ ಎಂದು ‌ಬಾಯ್ಮುಚ್ಚಿ ಕುಳಿತಿದ್ದಾರೆ.

ಕಾಮಗಾರಿ ಪೂರ್ಣವಾಗದೆ ಟೂಲ್ ಶುಲ್ಕ ವಸೂಲಿ ಮಾಡತ್ತಾ ಇದ್ದೀರಿ. ಕಾಮಗಾರಿ ಪೂರ್ಣ ಮಾಡುವುದಕ್ಕೆ ಇನ್ನೂ ಎಷ್ಟ ವರ್ಷ ಬೇಕು ಎಂದು ಪ್ರಶ್ನಿಸಿದರು. ಇನ್ನೂ ಯಾಕೆ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳತ್ತಾ ಇಲ್ಲ ಎಂದು ಎನ್ ಎಚ್ ಎ ಐ ಅಧಿಕಾರಿಳನ್ನು ಪ್ರಶ್ನಿಸಿದರು.

ಸಚಿವರ ಪ್ರಶ್ನೆಗೆ ಉತ್ತರಿಸಿದ ರಾಷ್ಟೀಯ ಹೆದ್ದಾರಿ ಅಧಿಕಾರಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ಸಮಸ್ಯೆ ಉಂಟಾಗಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಎಲ್ಲಿಯೂ ಕಲ್ಲು ಸಿಗತ್ತಾ ಇಲ್ಲ ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿರುವುದಾಗಿ ಉತ್ತರಿಸಿದರು. ಇದಕ್ಕೆ ಸಚಿವ ಮಂಕಾಳು ವೈದ್ಯ ಅವರು ಹೆದ್ದಾರಿ ಪಕ್ಕದಲ್ಲಿ ಸಾಕಷ್ಟು ಜಲ್ಲಿಕಲ್ಲಿನ ರಾಶಿ ಇದೆ.

ಅದನ್ನ ಬಳಿಸಿಕೊಳ್ಳಲು ಆಗತ್ತಾ ಇಲ್ಲವಾ. ಆ ಜಲ್ಲಿ ಕಲ್ಲು ಬೇರೆ ಕಡೆ ಮಾರಾಟ ಮಾಡತ್ತಿದ್ದೀರಾ ? ಎಂದು ಪ್ರಶ್ನೆ ಮಾಡಿದ ಸಚಿವರು, ತಕ್ಷಣದಿಂದ ಹೆದ್ದಾರಿ ಬದಿಯಲ್ಲಿರುವ ಎಲ್ಲಾ ಜಲ್ಲಿಗಳನ್ನ ಸೀಜ್ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿಯಿಂದಾಗಿ ಯಾವುದೇ ಸಮಸ್ಯೆಯಾದರೂ ಹೆದ್ದಾರಿ ಇಲಾಖೆ ಹಾಗೂ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಹೊಣೆ ಹೊರಬೇಕಾಗುತ್ತದೆ ಎಂದರು.
….

Latest Indian news

Popular Stories