ಅಲ್ಪ ಸಂಖ್ಯಾತರ ಓಲೈಕೆ ಹೆಚ್ಚಾಗಿದೆ, ಬಹುಸಂಖ್ಯಾತರನ್ನು ನಿರ್ಲಕ್ಷಿಸಲಾಗುತ್ತಿದೆ : ನೂತನ ಸಂಸದ ಕಾಗೇರಿ ಆರೋಪ

ಕಾರವಾರ : ರಾಜ್ಯ ಸರ್ಕಾರ ಭ್ರಮನಿರಸನವನ್ನು ತಂದಿದೆ. ಅಭಿವೃದ್ಧಿಗೆ ಇನ್ನಾದರೂ ಒತ್ತು ಕೊಡಬೇಕು ಎಂದು ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಅವರು ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು‌.

ರಾಜ್ಯ ಸರ್ಕಾರ ಜನ ವಿರೋಧಿಯಾದ್ದರಿಂದ ನಮಗೆ ಹೆಚ್ಚಿನ ಸ್ಥಾನ ಕರ್ನಾಟಕದಲ್ಲಿ ಬಂದವು‌. ಸರ್ಕಾರ ಸಂವಿಧಾನ ವಿರೋಧಿಯಾಗಿ , ಬಹುಸಂಖ್ಯಾತ ಆಶಯಗಳನ್ನು ತುಳಿಯುತ್ತಿದೆ ಎಂದರು.

ಇನ್ನು ಅಭಿವೃದ್ಧಿ ಕೆಲಸ ಮಾಡಬೇಕು ಎಂದ ಸಂಸದ ಕಾಗೇರಿ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕೆಲಸ ಪೂರ್ಣ ಮಾಡಿಸುವೆ ಎಂದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಮುಂದಿದೆ. ರೈಲ್ವೆ ಯೋಜನೆಗಳನ್ನು ಜಾರಿ ಮಾಡಬೇಕಿದೆ ಎಂದರು. ಬಂದರುಗಳನ್ನು ಅಭಿವೃದ್ಧಿ ಮಾಡುವೆ ಎಂದರು . ಬಿಜೆಪಿ
ಶಾಸಕ ಜಿಲ್ಲೆಯಲ್ಲಿ ಒಬ್ಬರೇ ಎಂಬ ಮಾತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದಾಗ ಹೆಬ್ಬಾರ ರಾಜ್ಯ ಸಭಾ ಚುನಾವಣೆಯಲ್ಲಿ ಮತ ಹಾಕಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಅವರು ಚುನಾವಣೆ ಎದುರಿಸಲಿ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಅವರು ಆಯ್ಕೆಯಾದ ಪಕ್ಷದ ಕೆಲಸ ಮಾಡಬೇಕು. ಇದು ಪ್ರಜಾಪ್ರಭುತ್ವ ತತ್ವ. ಇಲ್ಲ ಎಂದಾದರೆ ಅವರು ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಎಂದರು‌ .ಜನರು ತೀರ್ಮಾನ ಮಾಡಲಿ. ಇದಕ್ಕೆ ನಾವು ಸಿದ್ದ ಎಂದರು‌ .

ಐಆರ್ ಬಿ ಸರ್ಕಾರದ ಆಶಯದಂತೆ ಕೆಲಸ ಮಾಡಬೇಕು. ಇದುವರೆಗೂ ಆದ ತಪ್ಪು ತಪ್ಪೇ‌ . ಇನ್ನು ಮುಂದೆ ತಪ್ಪಾಗಬಾರದು. ಮಳೆಗಾಲದಲ್ಲಿ ಆಗುವ ತೊಂದರೆ ಮೊದಲು ನಿವಾರಿಸಲಿ. ನಂತರ ಮಾಡಬೇಕಾದ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ. ಉದ್ಯೋಗ ಸೃಷ್ಟಿಗೆ ಅವಕಾಶ ಇದೆ. ರಾಜ್ಯದವರೇ ಕೇಂದ್ರದ ಮಂತ್ರಿಗಳಾಗಿದ್ದಾರೆ. ನಿರ್ಮಲಾ ಸೀತಾರಾಮನ್, ಜೋಶಿ, ಕುಮಾರ ಸ್ವಾಮಿ, ಸೋಮಣ್ಣ, ಶೋಭಾ ಕರಂದ್ಲಾಜೆ ಮಂತ್ರಿಗಳಾಗಿದ್ದಾರೆ. ಅವರ ಸಹಕಾರ ಪಡೆದು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಅನೇಕ ಹೊಸ ಯೋಜನೆ ತರುವೆ ಎಂದು ಸಂಸದ ಕಾಗೇರಿ ಹೇಳಿದರು.

ಕೇಂದ್ರ ಸರ್ಕಾರದ ಅನೇಕ ಯೋಜನೆ ಜಾರಿ ತರುವಾಗ ರಾಜ್ಯ ಸರ್ಕಾರದ ಸಹಕಾರ ಬೇಕೇಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವೆ. ರಾಜ್ಯದಲ್ಲಿ ನನಗೆ ಪರಿಚಿತರೇ ಇದ್ದಾರೆ. ಹಾಗಾಗಿ ತೊಂದರೆ ಆಗಲ್ಲ ಎಂದರು . ಕಾರವಾರ 69 ಸಾವಿರ, ಖಾನಾಪುರ 59, ಕಿತ್ತೂರು ,36 ಸಾವಿರ, ಹಳಿಯಾಳ 16, ಶಿರಸಿ ಕ್ಷೇತ್ರದಲ್ಲಿ 30 ಸಾವಿರ ಲೀಡ್ ಕೊಟ್ಟಿದ್ದಾರೆ. ಕಾರವಾರದ ಬಗ್ಗೆ ವಿಶೇಷ ಅಭಿನಂದನೆಗಳು ಎಂದರು. ಚುನಾವಣೆ ನೋಡಿದಾಗ ಅಲ್ಪಸಂಖ್ಯಾತ ಸಮುದಾಯದವರು ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ಇರಬೇಕು ಅಂದಿದ್ದೆ. ಕಾಂಗ್ರೆಸ್ ನಿಮ್ಮನ್ನು ವಿಭಜಿಸುತ್ತದೆ ಎಂದಿದ್ದೆ. ನನ್ನ ಅನುಭವದ ಪ್ರಕಾರ ಅಲ್ಪ ಸಂಖ್ಯಾತರು ಕಾಂಗ್ರೆಸ್ ಷಡ್ ಯಂತ್ರಕ್ಕೆ ಬಲಿಯಾಗಿದ್ದಾರೆ ಎಂದರು. ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಬನ್ನಿ, ನಮಗೆ ಮತ ಹಾಕಿ ಎಂದು ಈಗಲೂ ಆಗ್ರಹಪೂರ್ವಕವಾಗಿ ಹೇಳುತ್ತಿದ್ದೇನೆ ಎಂದರು. ಕೇಂದ್ರದ ಯೋಜನೆ ಲಾಭ ಪಡೆಯುತ್ತೀರಿ. ಆದರೆ ಮತ ಕಾಂಗ್ರೆಸ್ ಪಕ್ಷಕ್ಕೆ ಹಾಕುತ್ತಿರಿ. ಇದು ಸರಿಯಲ್ಲ ಎಂದು ಸಂಸದ ಕಾಗೇರಿ ಹೇಳಿದರು. ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ರಾಜಕೀಯ ಷಡ್ ಯಂತ್ರ. ತನಿಖೆ ನಡೆಯುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ದೂರು ನೀಡಿದಾಕೆ ದಿನವೂ ದೂರು ನೀಡುವವಳು. ಹಾಗಾಗಿ ಇದು ಷಡ್ ಯಂತ್ರ. ಯಡಿಯೂರಪ್ಪ ಈ ಆರೋಪ ದಿಂದ ಹೊರಬರುತ್ತಾರೆ ಎಂದರು.

Latest Indian news

Popular Stories