ಹೋಂ ಸ್ಟೇಗಳಲ್ಲಿ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯ :ಪ್ರಿ ಪ್ರಿವೆನಷನ್ ಆ್ಯಕ್ಟ ಬಳಸದ ಅರಣ್ಯಾಧಿಕಾರಿಗಳು

ಕಾರವಾರ : ರಾಮನಗರ ಜಿಲ್ಲೆಯ ಹೋಂ ಸ್ಟೇಯಲ್ಲಿ ಜಿಪ್ ಲೈನ್ ತುಂಡಾಗಿ ಮಹಿಳೆ ಸಾವನಪ್ಪಿದ ಘಟನೆ ಹಿನ್ನೆಲೆಯಲ್ಲಿ
ಜಿಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ವಿಮ್ಮಿಂಗ್, ರೋಪ್ ಗೇಮ್ಸ ನಡೆಸಲು ಅವಕಾಶ ಇಲ್ಲ ಎಂದು ಪ್ರವಾಸೋದ್ಯಮ ಉಪ ನಿರ್ದೇಶಕ ಜಯಂತ ಹೇಳಿದ್ದಾರೆ‌ . ಈ ಸಂಬಂಧ ಹೊಸ ನಿರ್ದೇಶನವನ್ನು ಹೊರಡಿಸಿದ್ದಾರೆ‌.‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಾದ್ಯಂತ ಅಧಿಕತವಾಗಿ ಹೋಂ ಸ್ಟೆ, ಹೋಟೆಲ್ ,ರೆಸಾರ್ಟನ್ನು ನಡೆಸುತ್ತಿರುವ ಎಲ್ಲಾ ಹೋಂಸ್ಟೇ ಮತ್ತು ಹೋಟೆಲ್, ರೆಸಾರ್ಟ ಮಾಲೀಕರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಹೋಂಸ್ಟೇ ನಡೆಸಲು ಮಾತ್ರ ಅನುಮತಿಯನ್ನು ನೀಡಲಾಗಿದೆ.
ಇತರೆ ಕ್ರೀಡೆಗಳಿಗೆ ಪ್ರವಾಸೋದ್ಯಮ ಇಲಾಖೆ
ಅವಕಾಶವನ್ನು ಮಾಡಿಕೊಟ್ಟಿರುವುದಿಲ್ಲ. ಆದ್ದರಿಂದ ಹೋಂಸ್ಟೇಯಲ್ಲಿ ಇನ್ನಿತರ ಚಟುವಟಿಕೆಗಳು ಅಂದರೆ ಜಿಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ವಿಮ್ಮಿಂಗ್ ರೋಪ್ ಗೇಮ್ಸ, ಆರ್ಚರಿ, ಡಾರ್ಟ ಬೋರ್ಡ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಈ ಕೂಡಲೇ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ನೀಡಬೇಕು.
ಸದರಿ ಚಟುವಟಿಕೆ ನಡೆಸಲು ಪೂರಕ ದಾಖಲೆಗಳನ್ನು ಸಲ್ಲಿಸಿ ಈ ಕೂಡಲೇ ಅನುಮತಿಯನ್ನು ಪಡೆಯಬೇಕು. ಅನುಮತಿ ಪಡೆಯದೇ ಇರುವುದರ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಹೋಂಸ್ಟೇಗಳ ಸ್ಥಳ ತಪಾಸಣೆ ನಡೆಸಿ ಅನುಮತಿ ಪತ್ರವನ್ನು ರದ್ದುಗೊಳಿಸಲಾಗುವುದು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


ಅನೇಕ ಮಾಲೀಕರ ಬಳಿ ಪ್ರವಾಸೋದ್ಯಮ ಇಲಾಖೆಯ ನಿಯಮಾವಳಿಗಳ ಅನುಸಾರ ನೋಂದಣಿ ಮಾಡಲು ಸರಿಯಾದ ದಾಖಲೆಗಳು ಲಭ್ಯವಿಲ್ಲದೇ ಪಂಚಾಯಿತಿಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ ಹಾಗೂ ಪೋಲಿಸ್ ಇಲಾಖೆಯ ನಿರಾಪೇಕ್ಷಣಾ ಪ್ರಮಾಣದೊಂದಿಗೆ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಹೋಂಸ್ಟೇಗಳಿಂದಾಗಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯದಿದ್ದಲ್ಲಿ ಈ ಕೂಡಲೇ ನೋಂದಣಿ ಮಾಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಮಾಧ್ಯಮಗಳ ಮೂಲಕ ಪ್ರವಾಸೋದ್ಯಮಿಗಳಿಗೆ ತಿಳಿಸಿದ್ದಾರೆ.

ಪ್ರೀ ಪ್ರಿವೆನಷನ್ ಆಕ್ಟ್ ಬಳಸುತ್ತಿಲ್ಲ :
ಮರ ದಿಂದ ಮರಕ್ಕೆ ಜಿಪ್ ಲೈನ್ ಕಟ್ಟಲು ಅವಕಾಶವಿಲ್ಲ. ಪ್ರಿ ಪ್ರಿವೆನಷನ್ ಆಕ್ಟ್ ಪ್ರಕಾರ ಅರಣ್ಯಾಧಿಕಾರಿಗಳು ಜಿಪ್ ಲೈನ್ ನಡೆಸುವವರ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿ,ಜಿಪ್ ಲೈನ್ ಗೆ ಮರ ಬಳಸಿದ್ದರೆ, ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕು. ಆದರೆ ಈ ಪ್ರಕಾರದ ಒಂದೂ ಪ್ರಕರಣ ಜಿಲ್ಲೆಯಲ್ಲಿ ನಡೆದಿಲ್ಲ. ಇದರಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೂ ಇದೆ ಎಂದು ಪರಿಸರವಾದಿಗಳ ಅಭಿಪ್ರಾಯ. ಕಾನೂನು ಪ್ರಕಾರ ಪಿಲ್ಲರ್ ಕಂಬ ಹಾಕಿ ಜಿಪ್ ಲೈನ್ ಚಟುವಟಿಕೆಗಳನ್ನು ನಡೆಸಬಹುದು. ಇದಕ್ಕೂ ಮುನ್ನ ಸಂಬಂಧಿಸಿದ ಇಲಾಖೆಗಳ ಅನುಮತಿ ಸಹ ಕಡ್ಡಾಯವಾಗಿದೆ. ‌
………..

Latest Indian news

Popular Stories