ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಪ್ರಮೋದ್ ಮಧ್ವರಾಜ್‌ ಅಭ್ಯರ್ಥಿ ಅಗಲಿ: ಕಿಶೋರ್ ಡಿ.ಸುವರ್ಣ

ಕಾರವಾರ : ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮೀನುಗಾರ ಸಮಾಜದ ನಾಯಕ ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್ ನೀಡುವಂತೆ ಕಿಶೋರ್ ಡಿ.ಸುವರ್ಣ ಒತ್ತಾಯಿಸಿದ್ದಾರೆ.

ಅವರು ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದರು.
2019ರ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ . ರಾಜ್ಯದಲ್ಲಿ ಒಬಿಸಿ ವರ್ಗ ಒಟ್ಟು ಜನಸಂಖ್ಯೆಯ 50 ರಷ್ಟಿದ್ದರೂ ಒಬಿಸಿ ಅಭ್ಯರ್ಥಿಗಳಿಗೆ ಈತನಕ ಒಂದೇ ಒಂದು ಟಿಕೆಟ್ ನೀಡಿಲ್ಲವಾದ್ದರಿಂದ, ಬಿಜೆಪಿಗೆ ಈ ಸಕ ಒಬಿಸಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮೀನುಗಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ರಾಜಕೀಯ ವೇದಿಕೆಗಳಲ್ಲಿ ಮನ್ನಣೆ ಹಾಗೂ ಪ್ರಾತಿನಿಧ್ಯವನ್ನು ಪಡೆಯಲು ದೀರ್ಘ ಕಾಲ ಹೋರಾಡುತ್ತಿದ್ದಾರೆ‌ . ಮೀನುಗಾರರ ಸಮಾಜವನ್ನ ಬಹಳ ಸಮಯದಿಂದ ನಿರ್ಲಕ್ಷಿಸಲಾಗಿದ್ದು ಮೀನುಗಾರರ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ರಾಜಕೀಯ ವೇದಿಕೆಗಳಲ್ಲಿ ನಮ್ಮ ಸದುದ್ದೇಶವನ್ನು ಸಮರ್ಥವಾಗಿ ಸಮರ್ಥಿಸುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆಗೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಮೋದ್ ಮಧ್ವರಾಜ್‌ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮೋದ್‌ ಮಧ್ವರಾಜ್ ಅರವರು ರಾಜಕೀಯ ಹಿನ್ನೆಲೆಯಿಂದ ಬಂದವರಾಗಿದ್ದು, ಕಳೆದ 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ, 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರದ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಸಮಾಜದ ಹಿತಾಸಕ್ತಿಗಳ ಬಗ್ಗೆ ಪರಿಣಾಮಕಾರಿಯಾಗಿ ಪ್ರತಿನಿಧಿಸಿ ಅಂತರ್ಗತ ಬೆಳವಣಿಗೆ ಮತ್ತು ಸಾಮಾಜಿಕ, ಆರ್ಥಿಕ, ಪ್ರಗತಿಗೆ ಭವಿಷ್ಯದ ಯೋಜನೆ ಮತ್ತು ಬೆಳವಣಿಗೆಗೆ ಅವರ ಬದ್ಧತೆಯು ಗಣನೀಯವಾಗಿದೆ. ಅಸಂಘಟಿತ ವ್ಯಕ್ತಿಗಳ ವಿಶ್ವಾಸ ಮತ್ತು ಮೆಚ್ಚುಗೆ ಪಡೆದವರಾಗಿದ್ದು, ಪ್ರಮೋದ್ ಮಧ್ವರಾಜ್‌ ರವರ ಪರಿಶ್ರಮ, ತ್ಯಾಗ, ಸಮರ್ಪಣೆ, ಚತುರ ಸಂಘಟಣೆಯಿಂದ ಸಮಾಜದ ನಿರಂತರ ಸಂಪರ್ಕ ಹಾಗೂ ರಕ್ತಗತವಾಗಿ ಬಂದಿರುವ ತನ್ನ ಸೇವಾ ಭಾವನೆಯನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ, ಟ್ರಸ್ಟ್ ಮುಖೇನ ಸಮಾಜದ ಎಲ್ಲಾ ಜಾತಿ ಮತ ಧರ್ಮಗಳ ಕಷ್ಟ ಕಾರ್ಪಣ್ಯಗಳಿಗೆ ದುಡಿದ ಸಂಪತ್ತನ್ನು ಆರ್ಥಿಕವಾಗಿ ಅಸಹಾಯಕರಾಗಿರುವವರಿಗೆ ಸಮರ್ಪಿಸುತ್ತಿರುವ ರಾಜಕಾರಣಿಯಾಗಿದ್ದಾರೆಂದು ಸುವರ್ಣ ಹೇಳಿದರು.
ನರೇಂದ್ರ ಮೋದಿಯವರ ವರ್ಚಸ್ವಿ ನೇತ್ರತ್ವದಲ್ಲಿ ದೇಶದ ಆದ್ಭುತ ಪ್ರಗತಿ. ದೇಶದ ರಕ್ಷಣೆ. ಭಯೋತ್ಪಾದನೆ ನಿಗ್ರಹ, ವಿದೇಶಿ ನೀತಿ, ಭ್ರಷ್ಟಾಚಾರ ರಹಿತ ಆಡಳಿತ, ಭವಿಷ್ಯದ ಯೋಜನೆ ಮತ್ತು ಬಿಜೆಪಿಯ ನೈಜ ರಾಷ್ಟ್ರೀಯತೆಗೆ ಆಕರ್ಷಿತರಾಗಿ ಅವರು ಬಿಜೆಪಿಗೆ ಸೇರ್ಪಡೆಗೊಂಡು ಸಮಾಜದ ನಿರಂತರ ಸಂಪರ್ಕದೊಂದಿಗೆ ಪಕ್ಷದ ಸಂಘಟನೆ ಮತ್ತು ಬೆಳವಣಿಗೆಗೆ ಸಾಮಾನ್ಯ ವ್ಯಕ್ತಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡ ಯೋಗ್ಯ ವ್ಯಕ್ತಿಯಾಗಿರುವ ಹಿಂದುಳಿದ ವರ್ಗದ ಮೀನುಗಾರ ಸಮಾಜದ ನಾಯಕ ಪ್ರಮೋದ್ ಮಧ್ವರಾಜ್‌ ಅವರ ಬೆನ್ನಿಗೆ ಸಮಾಜ ನಿಂತು ಬೆಂಬಲವನ್ನು ನೀಡುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರವೊಂದರಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿದೆ. ಹೀಗಾಗಿ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದಿಂದ ಮದ್ವರಾಜ್ ಅವರಿಗೆ ನೀಡುವಂತೆ ಒತ್ತಾಯಿಸಿದರು.
ಅ ಭಾ ಮೀ ಸಂ ಕಾರ್ಯದರ್ಶಿ, ಕರುಣಾಕರ ಸಾಲೆ ಸಂಘಟನಾ ಕಾರ್ಯದರ್ಶಿ, ನಿತಿನ್ ಗಾಂವ್ಕರ ಗಾಬಿತ ಸಮಾಜ , ರೋಷನ ಹರಿಕಂತ್ರ , ಹರಿಕಂತ್ರ ಕ್ಷೇಮಾಬಭಿವೃದ್ಧಿ ಸಂಘ, ಭರತ, ಸಚಿನ್ ಎಸ್ ಹರಿಕಂತ್ರ, ಚೇತನ್ ಕೆ ಹರಿಕಂತ್ರ, ವಿಶ್ವನಾಥ ತಾಂಡೇಲ, ಮೋಹನ ಕುಂದಲ
, ಮನೋಜ ಕರ್ಕೆರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
…..

Latest Indian news

Popular Stories