ಪಿಡಬ್ಲುಡಿ ಎಕ್ಸಿಕ್ಯೂಟಿವ್ ‌ಎಂಜಿನಿಯರ್ ಗೆ ಮಾಹಿತಿ ಹಕ್ಕುದಾರರ ಕಾಟ : ಆ. ಸು.ಆಯೋಗದ ಎದುರು ಅಳಲು!

ಕಾರವಾರ: ಕಾರವಾರ ಹಾಗೂ ಶಿರಸಿ ವಿಭಾಗದ ಪಿಡಬ್ಲುಡಿ ಎಕ್ಸಿಕ್ಯೂಟಿವ್ ‌ಎಂಜಿನಿಯರ್ ಗಳು ಮಂಡ್ಯದ ಮಾಹಿತಿ ಹಕ್ಕುದಾರರು ಉತ್ತರ ಕನ್ನಡ ಜಿಲ್ಲೆಗೆ ಬಂದು ಕಾಟ ಕೊಡ್ತಾ ಇದಾರೆ, ಹತ್ತು ರೂ.ಪೋಸ್ಟಲ್ ಆರ್ಡರ್ ಹಚ್ಚಿ ಹತ್ತು ವರ್ಷದ ಹಿಂದಿನ ಮಾಹಿತಿ ಕೇಳ್ತಾರೆ. ಅವರ ಹತ್ತು ರೂಪಾಯಿಗೆ ನಾವು ಸಾವಿರ ರೂ. ಖರ್ಚು ಮಾಡಬೇಕು. ಮಾಹಿತಿ ಕೋಡೋದೆ ಕೆಲಸ ಆಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರ ಎದುರು ಅಳಲು ತೋಡಿ ಕೊಂಡ ಘಟನೆ ಬುಧುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.


ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕಾರವಾರದಲ್ಲಿ ನಡೆಸಿದ‌ ಸಭೆಯಲ್ಲಿ ಮಾಹಿತಿ ಹಕ್ಕುದಾರರ ಕಾಟ ಪ್ರಸ್ತಾಪವಾಯಿತು.


ಪಿಡಬ್ಲುಡಿ ಎಕ್ಸಿಕ್ಯೂಟಿವ್ ಎಂಜಿನಿಯರ್ ದುರ್ಗಾದಾಸ ಮೊದಲು ವಿಷಯ ಪ್ರಸ್ತಾಪಿಸಿ , ಮಾಹಿತಿ ಹಕ್ಕುದಾರ ಮಂಡ್ಯದವ. ಕಾರವಾರಕ್ಕೆ ಬಂದು ಹತ್ತು ವರ್ಷದ ಹಿಂದಿನ ಹತ್ತು ಕಾಮಗಾರಿ ಮಾಹಿತಿ ಕೇಳ್ತಾನೆ. ಇದರ ಹಿಂದೆ ದುರುದ್ದೇಶ ಕಾಣುತ್ತಿದೆ. ಆಯಾ ವಿಧಾನಸಭಾ ಕ್ಷೇತ್ರದ ಮಾಹಿತಿ ಹಕ್ಕುದಾರರು ಮಾತ್ರ ಆಯಾ ತಾಲೂಕು , ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಮಾಹಿತಿ ಕೇಳುವಂತೆ, ‌ಒಬ್ಬರು ಒಂದು ಇಲಾಖೆಗೆ ಒಂದು ವಿಷಯದಲ್ಲಿ ಮಾತ್ರ ಮಾಹಿತಿ ಕೇಳುವಂತೆ ಮಾಹಿತಿ ಹಕ್ಕು ಅಧಿ ನಿಯಮ ಕಾ‌ನೂನಿಗೆ ತಿದ್ದುಪಡಿ ತನ್ನಿ ಎಂದು ಆಯೋಗದ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಶಿರಸಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಹ ನನಗೂ ಸಹ ಮಾಹಿತಿ ಹಕ್ಕು ಹೆಸರಲ್ಲಿ ಕಾಟ ಕೊಡ್ತಿದಾರೆ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸಹ ನಮ್ಮ ಕಚೇರಿಗೂ ಮಾಹಿತಿ ಹಕ್ಕುದಾರರು ಮಾಹಿತಿ ಕೇಳುವವರ ಸಂಖ್ಯೆ ಹೆಚ್ಚಿದೆ. ಆದರೆ ನೌಕರರ ವಯಕ್ತಿಕ ವಿಷಯವನ್ನು ಮಾಹಿತಿ ಹಕ್ಕಿನಡಿ ಕೇಳುವಂತಿಲ್ಲ ಎಂದು ನಿಯಮ ಇದೆ. ಈ ನಿಯಮ ಬಂದ ಮೇಲೆ ಹಾವಳಿ ಕಡಿಮೆಯಾಗಿದೆ ಎಂದರು. ಕೊನೆಯಲ್ಲಿ ಸಲಹೆಗಳನ್ನು ಸರ್ಕಾರಕ್ಕೆ ಕೊಡುವುದಾಗಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಹೇಳಿದರು.
….

Latest Indian news

Popular Stories