ಕರಾವಳಿ ತಾಲೂಕುಗಳಲ್ಲಿ ರವಿವಾರ ಬೆಳಗಿನತನಕ ರೆಡ್ ಅಲರ್ಟ : ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ‌ ಜಿಲ್ಲಾಧಿಕಾರಿ

ಕಾರವಾರ: ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ‌ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಶನಿವಾರ ದಿಂದ ರವಿವಾರ ಬೆಳಗಿನತನಕ ಭಾರೀ ಮಳೆ‌ ಬೀಳಲಿದ್ದು, ರೆಡ್ ಅಲರ್ಟ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ, ಅನುದಾನ ಸಹಿತ, ಅನುದಾನ‌ರಹಿತ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ರಜೆ ಘೋಷಿಸಿದ್ದಾರೆ.

ಘಟ್ಟದ ಮೇಲಿನ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ, ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಬಿಇಒ ಗಳಿಗೆ ಬಿಡಲಾಗಿದೆ. ಮಳೆ ನೆರೆಯಿಂದ ಉಂಟಾಗುವ ಸನ್ನಿವೇಶ ಎದುರಿಸಲು ತಹಶಿಲ್ದಾರರು, ಸಹಾಯಕ ಕಮಿಷನರ್ ಗಳಿಗೆ ಸೂಚಿಸಲಾಗಿದೆ.

Latest Indian news

Popular Stories