ಸಾಂದರ್ಭಿಕ ಚಿತ್ರ
ಕಾರವಾರ: ಕಾರವಾರ ನಗರದ ಖುರ್ಸವಾಡ ಪ್ರದೇಶದ ರಸ್ತೆ ಬದಿ ನವಜಾತ ಶಿಶು ಪತ್ತೆಯಾಗಿದ್ದು , ಆರೋಗ್ಯ ಇಲಾಖೆಯ 108 ಸಿಬ್ಬಂದಿಗಳು ಶಿಶುವನ್ನು ರಕ್ಷಣೆ ಮಾಡಿದ್ದಾರೆ.
ರಸ್ತೆಯ ಬದಿಯ ಹಳೆಯ ಕಟ್ಟಡದಿಂದ ಮರಗಿಡಗಳ ಸಂದಿಯಲ್ಲಿ ಇದ್ದ ಶಿಶು ಪತ್ತೆಯಾಗಿದೆ. ಮಗುವನ್ನು ಗಮನಿಸಿದ ಸ್ಥಳೀಯರು,
108 ತುರ್ತುಸೇವೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ 108 ವಾಹನ ಸಿಬ್ಬಂದಿ ಶಿಶುವನ್ನು ರಕ್ಷಿಸಿದ್ದಾರೆ. ಸದ್ಯ ನವಜಾತ ಶಿಶುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವನ್ನ ಐ.ಸಿ.ಯು.ನಲ್ಲಿ ಇಡಲಾಗಿದ್ದು ವೈದ್ಯರು ನಿಗಾ ವಹಿಸಿದ್ದಾರೆ. ಮಗುವಿನ ತಾಯಿಯ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿದೆ. ಕಾರವಾರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.