ಕಾರವಾರ: ಬಾವಿ ತೋಡಿದ ಗೌರಿ ನಾಯ್ಕಗೆ ವಿಶ್ರಾಂತಿ : ಸುರಕ್ಷತಾ ದೃಷ್ಟಿಯಿಂದ ಬಾವಿಗೆ ಹಲಗೆ

ಕಾರವಾರ: ಶಿರಸಿ ಹೊರ ವಲಯ ಗಣೇಶ ನಗರದ ಅಂಗನವಾಡಿಯೊಂದಕ್ಕೆ ಸ್ವಯ‌ಂ ಪ್ರೇರಣೆಯಿಂದ ಬಾವಿ ತೋಡಲು ಮುಂದಾಗಿದ್ದ ಗೌರಿ ನಾಯ್ಕ ಕಾರ್ಯಕ್ಕೆ ಅಧಿಕಾರಿ ವಲಯ ಸುರಕ್ಷಿತಾ ದೃಷ್ಟಿಯಿಂದ ಬಾವಿಗೆ ಯಾರೂ ಬೀಳದಂತೆ ಹಲಗೆ ಜೋಡಿಸಿದೆ.‌

ಗೌರಿ ನಾಯ್ಕ ಸ್ವಂತ ಒಬ್ಬಳೇ ಬಾವಿ ತೋಡುವ ಪ್ರವೀಣೆ ಎನಿಸಿಕೊಂಡಿದ್ದಾರೆ‌ . ಇದೇ ಜನವರಿ 30 ರಿಂದ ಫೆ. 18 ರತನಕ 30 ಅಡಿ ಆಳಕ್ಕೆ ಬಾವಿ ತೋಡಿದ್ದರು. ಆದರೆ ಬಾವಿಯಲ್ಲಿ ನೀರು ಕಾಣಿಸಿ ಕೊಂಡಿಲ್ಲ. ಗೌರಿ ನಾಯ್ಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತೇ ಹೊರತು, ಯಾರು ಸಹ ಆಕೆಯ ಶ್ರಮದಲ್ಲಿ ಪಾಲುದಾರರಾಗಲೂ ಮುಂದಗಲಿಲ್ಲ.
ಬಾವಿ ತೋಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮತ್ತು ಶಿಕ್ಷಣ ಇಲಾಖೆಯಿಂದ ನಿಗಾ ಇಡಲಾಗಿತ್ತು. ಗೌರಿ ನಾಯ್ಕಗೆ ಅಪಾಯವಾದರೆ ಅದರ ಲಾಭವನ್ನು ಸರ್ಕಾರದ ವಿರೋಧಿಗಳು ಪಡೆಯಬಹುದು ಎಂಬ ಸುಳಿವು ಇಂಟಲಿಜೆನ್ಸ್ ತಲುಪಿಸಿತ್ತು. ಫೆ. 18 ರಂದು ಸ್ಥಳಕ್ಕೆ ಬಂದ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಗೌರಿ ನಾಯ್ಕರ ಶ್ರಮ ಶ್ಲಾಷಿಸಿ ಸನ್ಮಾನ ಮಾಡಿದರು‌ . ಹಾಗೂ ನಿಮಗೆ 56 ವರ್ಷ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಶ್ರಮದ ಕೆಲಸ ಬೇಡ. ಮಕ್ಕಳಿಗೆ ನೀರಿನ ಕೊರತೆ ಆದರೆ ಟ್ಯಾಂಕರ್ ಮೂಲಕ ನೀರು ಕೊಡುತ್ತೇವೆ. ನೀರು ಕೊಡುವುದು ಸರ್ಕಾರದ ಕೆಲಸ‌. ನೀವು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಗೌರವ ಪೂರ್ವಕವಾಗಿ ತಿಳಿ ಹೇಳಿ ಹೋಗಿದ್ದರು. ಆದರೂ ಗೌರಿ ನಾಯ್ಕ ಮತ್ತೆ ಬಾವಿ ತೋಡಲು ಮುಂದಾರು ಎನ್ನಲಾಗಿದೆ. ಇದು ಸ್ಪಷ್ಟವಾಗಿ ಸರ್ಕಾರದ ಇಲಾಖೆಗೆ ಕೆಟ್ಟ ಹೆಸರು ತರುವ ಉದ್ದೇಶ ಅಡಗಿದೆ ಎಂದು ಅರಿತ ತಾಲೂಕು ಆಡಳಿತ ತೋಡಿದ ಬಾವಿಗೆ ಮಕ್ಕಳು ಹಾಗೂ ದನ ಕರು ಬೀಳದಂತೆ ,ಬಾವಿ ಬಾಯಿಗೆ ಹಲಗೆ ಬಡಿದು ಸುರಕ್ಷಿತ ಕ್ರಮ ಕೈಗೊಂಡರು. ತಹಶಿಲ್ದಾರರ ಶ್ರೀಧರ ಖುದ್ದಾಗಿ ನಿಂತು ಬಾವಿ ಸುತ್ತ ಸುರಕ್ಷತೆಗೆ ಮುಂದಾದರು.
ಗೌರಿ ನಾಯ್ಕರ ಆರೋಗ್ಯ ಸಹ ಮುಖ್ಯ. ಮಕ್ಕಳ ಸುರಕ್ಷಿತೆ ಸಹ ಮುಖ್ಯ ಎಂದು ಅಧಿಕಾರಿ ವಲಯ ಹೇಳಿದೆ . ಅನಾಹುತವಾದಲ್ಲಿ ಅಮಾನತ್ ಶಿಕ್ಷೆಗೆ ಗುರಿಯಾಗಲಿರುವ ಕಾನೂನಾತ್ಮಕ ಅಂಶವನ್ನು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿ ಹೇಳಿದ್ದರು ಎನ್ನಲಾಗಿದೆ.

ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಸದ್ಯಕ್ಕೆ ಇಲ್ಲ. ಮೇ ತಿಂಗಳಲ್ಲಿ ನೀರಿನ ಕೊರತೆ ಉಂಟಾದಲ್ಲಿ
ಟ್ಯಾಂಕರ್ ಮೂಲಕ ನೀರು ನೀಡಲಾಗುವುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories