ಕುಮಟಾ – ಶಿರಸಿ ರಸ್ತೆ ಅಗಲೀಕರಣ ನೆಪದಲ್ಲಿ ರಸ್ತೆ ಸಂಚಾರ ಬಂದ್ ಬೇಡ : ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

ಕಾರವಾರ : ರಾಷ್ಟ್ರೀಯ ಹೆದ್ದಾರಿಯಾಗಿ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿದೆ. ಗುತ್ತಿಗೆ ಪಡೆದ ಆರ್‌ಎನ್‌ಎಸ್ ಕಂಪನಿ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನ ಬಂದ್ ಮಾಡಲು ಹೊರಟಿದೆ. ಆದರೆ ಯಾವುದೇ ಕಾರಣಕ್ಕೂ ರಸ್ತೆ ಬಂದ್ ಮಾಡಿ ಕಾಮಗಾರಿ ಮಾಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ ) ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಒತ್ತಾಯಿಸಿದ್ದಾರೆ.
ಕಾರವಾರದಲ್ಲಿ ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದೆ. ರಸ್ತೆ ಅಗಲೀಕರಣದಲ್ಲಿ ಸೇತುವೆ ಕಾಮಗಾರಿ ಹೊರತುಪಡಿಸಿ, ರಸ್ತೆ ಅಗಲೀಕರಣ ಕಾಮಗಾರಿಯು ಬಾಕಿಯಿದೆ. ಆದರೆ ಸೇತುವೆ ಕಾಮಗಾರಿಯ ನೆಪ ಹೇಳಿ ಗುತ್ತಿಗೆ ಪಡೆದ ಆರ್. ಎನ್ .ಎಸ್. ಕಂಪನಿ ,ಜಿಲ್ಲಾಧಿಕಾರಿ ಮೂಲಕ ಕುಮಟಾ ಶಿರಸಿ ರಸ್ತೆಯನ್ನು ಬಂದ್ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಡ ತರುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಕಂಪನಿಯ ಒತ್ತಡಕ್ಕೆ ಮಣಿದು ರಸ್ತೆ ಬಂದ್ ಮಾಡಲು ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು.
ಒಂದು ವೇಳೆ ಅನುಮತಿ ನೀಡಿದರೆ , ಕನಿಷ್ಠ ಮೂರು ವರ್ಷಗಳ ಕಾಲ ಶಿರಸಿ ಕುಮುಟ ರಸ್ತೆ ಬಂದ ಆಗುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು. ವಿಶೇಷವಾಗಿ ಕುಮಟಾ ಶಿರಸಿ ರಸ್ತೆ ಯುದ್ದಕ್ಕೂ ಕೃಷಿ ಬದುಕನ್ನೇ ನಂಬಿಕೊಂಡು ಇರುವ ಸಾವಿರಾರು ಕೃಷಿಕರು ಸಂಚಾರಕ್ಕೆ ಪರದಾಡುವ ಸ್ಥಿತಿ ಉಂಟಾಗುತ್ತದೆ ದಯವಿಟ್ಟು ಸಿರಸಿ ಕುಮಟಾ ರಸ್ತೆಯನ್ನ ಅಭಿವೃದ್ಧಿಯ ಹೆಸರಿನಲ್ಲಿ ಬಂದ್ ಮಾಡಕೂಡದು ಅಭಿವೃದ್ಧಿಗೆ ವಿರೋಧವಾಗಿದೆ.
ಈಗಾಗಲೇ ಮಳೆಗಾಲ ಮುಗಿದಿದೆ ಸೇತುವೆ ಕಾಮಗಾರಿ ಮಾಡಬಹುದು. ಹೀಗಾಗಿ ಜಿಲ್ಲಾಡಳಿತ ಕಾಮಗಾರಿ ನೆಪದಲ್ಲಿ ಕಂಪನಿಗೆ ರಸ್ತೆ ಬಂದ್ ಮಾಡಲು ಅನುಮತಿ ನೀಡಬಾರದು. ಒಂದುವೇಳೆ ಬಂದ್ ಮಾಡಲು ಅವಕಾಶ ನೀಡಿದರೆ ,ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಗೂ ಮುನ್ನ ರಸ್ತೆ ಸಂಚಾರ ಬಂದ್ ಬೇಡ ಎಂದು ಜಿಲ್ಲಾಡಳಿತಕ್ಕೆ ಸಹ ಕರವೇ ಮನವಿ ಸಲ್ಲಿಸಿತು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮನವಿ ಸ್ವೀಕರಿಸಿದ್ದಾರೆ.
….