ಕಾರವಾರ: ನಟ ಡಾಲಿ ಧನಂಜಯ ಮುರುಡೇಶ್ವರ ಬಳಿಯ ದ್ವೀಪ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಮುರುಡೇಶ್ವರ ಮತ್ಸ್ಯ ಮೇಳಕ್ಕೆ ಆಗಮಸಿದ ಅವರು ನೇತ್ರಾಣಿಯಲ್ಲಿ ಸಾಹಜ ಜಲ ಕ್ರೀಡೆಯಲ್ಲಿ ಭಾಗವಹಿಸಿ ಸಮುದ್ರದಾಳಕ್ಕೆ ಹೋಗಿ ಮತ್ಸ್ಯ ಸಂಕುಲ ,ಹವಳದ ದಿಬ್ಬಗಳನ್ನು ವೀಕ್ಷಿಸಿದರು.

ಸಮುದ್ರ ಜಗತ್ತಿನ ಆಳದ ಪರಿಚಯ ಮಾಡಿಕೊಂಡ ನಟ ಧನಂಜಯ ಇದೊಂದು ಸಾಹಸದ ಕ್ಷಣವಾಗಿತ್ತು. ಸಮುದ್ರ ಜಗತ್ತಿನ ಪರಿಚಯ ಆಯಿತು. ಒಂದು ತಾಸು ಸಮುದ್ರದ ನಂಟಿನಲ್ಲಿದ್ದೆ. ಮತ್ತೆ ಬಿಡುವು ಮಾಡಿಕೊಂಡು ಸ್ಕೂಬಾ ಮಾಡಲು ಬರುವೆ ಎಂದರು. ಸಿನಿಮಾ ಶೂಟಿಂಗ್ ಗಡಿಬಿಡಿಯಿಂದ ದೂರ ಇದ್ದು, ಸ್ಕೂಬಾ ಡೈವಿಂಗ್ ಮಾಡಿದ ಅನುಭವ ರೋಚಕವಾಗಿತ್ತು. ನಮ್ಮ ರಾಜ್ಯದ ಕರಾವಳಿಯ ಸಮುದ್ರದಾಳದಲ್ಲಿ ಹವಳದ ದಿಬ್ಬ, ನೂರಾರು ಜಾತಿಯ ಬಣ್ಣದ ಮೀನು ನೋಡಿ ಖುಷಿಯಾಯಿತು ಎಂದು ನಟ ಧನಂಜಯ ಹೇಳಿದರು. ಆಕ್ವಾ ರೈಡ್ ಸ್ಕೂಬಾ ಸಂಸ್ಥೆ ಈಚೆಗೆ ಡೆಪ್ಯುಟಿ ಸಿಎಂ ಡಿ.ಕೆ.ಶಿವಕುಮಾರ್, ಸಚಿವ ಮಂಕಾಳು ವೈದ್ಯರಿಗೆ ಸ್ಕೂಬಾ ಪರಿಚಯ ಮಾಡಿತ್ತು. ಅದರ ಬೆನ್ನ ಹಿಂದೆ ನಟ ಧನಂಜಯ ಸ್ಕೂಬಾ ಮಾಡಿದ್ದು ವಿಶೇಷವಾಗಿತ್ತು.
….