ಕಡಲ್ಕೊರೆತ : ಜಂಗಲ್ ಲಾಡ್ಜ್ ಸ್ ನ ಕಾಟೇಜ್ಗಳು ಕಡಲಿಗೆ ಬಲಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕಾರವಾರ ಸಮೀಪ ದೇವಭಾಗ ಕಡಲತೀರದಲ್ಲಿ ಕಡಲ್ಕೊರೆತ ಉಂಟಾಗಿದೆ. ದೇವಭಾಗ ಜಂಗಲ್ ರೆಸಾರ್ಟನ ನಾಲ್ಕು ಕಾಟೇಜ್ ಕಡಲ್ಕೊರೆತಕ್ಕೆ ಬಲಿಯಾಗಿವೆ. ಪ್ರವಾಸಿಗರು ಉಳಿಯುವ ಕಾಟೇಜ್ ಮಳೆ ಗಾಳಿಗೆ ಹಾಗೂ ಕಡಲ್ಕೊರೆತ ಪರಿಣಾಮ ಪೂರ್ಣ ನಾಶವಾಗಿದ್ದು ಒಂದು ಕೋಟಿ ರೂ. ಹಾನಿಯಾಗಿದೆ. ದಂಡೆಯ ಗಾಳಿ ಮರಗಳು ನೆಲಕ್ಕೊರಗಿವೆ. ಜಂಗಲ್ ಲಾಡ್ಜ ಪ್ರವಾಸಿ ತಾಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಭಟ್ಕಳ, ಕುಮಟಾ,ಹೊನ್ನಾವರ, ಕಾರವಾರ ಸೇರಿದಂತೆ ಕರಾವಳಿ ತಾಲೂಕಿನಲ್ಲಿ ಸತತ ಮಳೆ ಮುಂದುವರೆದಿದೆ.

ಎಡೆ ಬಿಡದೆ ಸುರಿದ ಮಳೆ :ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲಿ ಬೆಳಿಗ್ಗೆ ಹೊತ್ತು ಮಳೆ ಕೊಂಚ ಬಿಡುವು ನೀಡಿತ್ತು. ನಂತರ ಅಪರಾಹ್ನದ ವರೆಗೆ ಎಡೆಬಿಡದೆ ಸುರಿಯಿತು.ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಶುಕ್ರವಾರ
ಮಳೆ ಮುಂದುವರಿಯಲಿದೆ ಎಂದು ಹೇಳಿದೆ.

ಗುರುವಾರ ಭಟ್ಕಳ, ಹೊನ್ನಾವರ ತಾಲೂಕಿನಾದ್ಯಂತ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಕಳೆದ 24 ತಾಸುಗಳಲ್ಲಿ ಹೊನ್ನಾವರ 122.5 ಮಿಲಿ ಮೀಟರ್ ಮಳೆ ಆಗಿದೆ. ಭಟ್ಕಳ 123, ಕುಮಟಾ 66.6, ಕಾರವಾರ 33.2, ಅಂಕೋಲಾ 49, ಸಿದ್ದಾಪುರ 55,ಶಿರಸಿ 42, ಯಲ್ಲಾಪುರ 25.2 ,ದಾಂಡೇಲಿ 10.4, ಸುಫಾ 25 , ಮುಂಡಗೋಡ 11.4, ಹಳಿಯಾಳ 6.1 ಎಂ.ಎಂ. ಮಳೆಯಾಗಿದೆ.
ಜಿಲ್ಲೆಯ ಸರಾಸರಿ 43 .2ಮಿಲಿ ಮೀಟರ್ ಮಳೆ ಸುರಿದಿದೆ‌. ಹಳಿಯಾಳದಲ್ಲಿ ಕಡಿಮೆ ಮಳೆ ದಾಖಲಾಗಿದೆ. ಭಟ್ಕಳದಲ್ಲಿ ಅತೀ ಹೆಚ್ಚು ಮಳೆ ಬಿದ್ದಿದೆ. ಈ ವರ್ಷದಲ್ಲಿ ಭಟ್ಕಳ ಅತೀ ಹೆಚ್ಚು ಮಳೆ ಬಿದ್ದ ನಗರ ಎಂದು ದಾಖಲಾಗಿದೆ.
….

Latest Indian news

Popular Stories