ಉತ್ತರ ಕನ್ನಡ | ಸೀಬರ್ಡ್ ವೋಲ್ವೋ ಬಸ್ ವಜ್ರಳ್ಳಿ ಸಮೀಪ ಪಲ್ಟಿ : 8 ಜನ ಪ್ರಯಾಣಿಕರಿಗೆ ತೀವ್ರ ಗಾಯ

ಕಾರವಾರ : ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಸಿಬಡ್೯ ವೊಲ್ವೋ ಬಸ್ ಮಂಗಳವಾರ ಬೆಳಗಿನ ಜಾವ 03 – 15 ಕ್ಕೆ ಅಂಕೋಲಾ ತಾಲೂಕಿನ ವಜ್ರಳ್ಳಿ ಹತ್ತಿರದ ನವಮಿ ಹೋಟೆಲ ಸಮೀಪ ನಡು ರಸ್ತೆಯಲ್ಲೆ ಪಲ್ಟಿಯಾಯಿತು.
ವೋಲ್ವೋ ಬಸ್ ನಲ್ಲಿ ಕಡಿಮೆ ಪ್ರಯಾಣಿಕರಿದ್ದ ಕಾರಣ 8 ರಿಂದ 10 ಜನ ಪ್ರಯಾಣಿಕರಿಗೆ ಗಂಭೀರಗಾಯಗಳಾಗಿವೆ. ಪ್ರಯಾಣಿಕರೊಬ್ಬರ ಕಾಲು ಸಹ ಮುರಿದಿದೆ‌ . ಉಳಿದ 10 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಷಯ ತಿಳಿದು ತಕ್ಷಣ ಯಲ್ಲಾಪುರ ತಾಲೂಕಿನ ಗುಳ್ಳಾಪುರ 108 ಆಂಬುಲೆನ್ಸ್, ಯಲ್ಲಾಪುರ108 ಆಂಬುಲೆನ್ಸ್, ಅಂಕೋಲಾ 108 ಆಂಬುಲೆನ್ಸ್ ಹಾಗು ರಾಮನಗುಳಿ ಆಸ್ಪತ್ರೆ ಆಂಬುಲೆನ್ಸ್ ಅಪಘಾತ ಸ್ಥಳಕ್ಕೆ ಧಾವಿಸಿ ಬಂದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯ ನಿರ್ವಹಿಸಿದವು.

ಒಟ್ಟು ನಾಲ್ಕು ಆಂಬಲೇನ್ಸ್ ಗಳ ಮೂಲಕ ಗಾಯಾಳುಗಳನ್ನು ಅಂಕೋಲಾ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ಅಪಘಾತ ನಡೆದ ರಾಷ್ಟ್ರೀಯ ಹೆದ್ದಾರಿ 63 ನವಮಿ ಹೋಟೆಲ್ ಹತ್ತಿರದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಘಟನೆ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.

Latest Indian news

Popular Stories