ಕಾರವಾರ : ಶಿರೂರು ಗುಡ್ಡ ಕುಸಿತ ಘಟನೆ ಯಲ್ಲಿ ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ್, ಅವರ ಮಗಳು ಪಲ್ಲವಿ ನಾಯ್ಕ್ ಅವರಿಗೆ,
ಸರ್ಕಾರಿ ಉದ್ಯೋಗ ಕೊಡುವುದಾಗಿ ಸಚಿವ ಮಂಕಾಳು ವೈದ್ಯ ಹೇಳಿದ್ದರು. ಅವರು ಕೊಟ್ಟ ಮಾತನ್ನು ಇಂದು ನೆರವೇರಿಸಿದರು.
ಜಗನ್ನಾಥರ ಓರ್ವ ಮಗಳಿಗೆ ನೌಕರಿ ಕೊಡುವುದಾಗಿ ಮಾತು ಕೊಟ್ಟಂತೆ ,ಇಂದು ಉದ್ಯೋಗದ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮೂಲಕ ಹೊನ್ನಾವರದಲ್ಲಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ನೀಡಿರುವ ಕುರಿತ ಆದೇಶ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಹೊನ್ನಾವರ ದಲ್ಲಿ ಇಂದು ವಿತರಿಸಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯ ಹಾಗೂ ವಿವಿಧ ಅಧಿಕಾರಿಗಳು ಇದ್ದರು.